ಪಣಜಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಗೃಹ ಸಚಿವ ಅಮಿತ್ ಶಾ ಅವರನ್ನು ಗೋವಾದಲ್ಲಿ ಭೇಟಿಯಾಗಿದ್ದಾರೆ.
ಗೋವಾದ ಬಿಚೋಲಿಮ್, ಸಾಕ್ಲಿ, ಮಾಯೇಮ್ ಕ್ಷೇತ್ರದಲ್ಲಿ ಅಮಿತ್ ಶಾ ಕ್ಯಾಂಪೇನ್ ನಡೆಸುತ್ತಿದ್ದು, ಮನೆಗೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಚೋಲಿಂ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ, ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಕಂಡು ಅಮಿತ್ ಶಾ ಅವರು ‘ಜಾರಕಿಹೊಳಿ ಇದರ್ ಆವೋ'(ಇಲ್ಲಿ ಬನ್ನಿ) ಅಂದ್ರಂತೆ. ರಾಜ್ಯದ ಹಲವು ನಾಯಕರು ಪ್ರಚಾರ ವೇಳೆ ಉಪಸ್ಥಿತರಿದ್ದರೂ ರಮೇಶ್ ಜಾರಕಿಹೊಳಿರನ್ನು ಅಮಿತ್ ಶಾ ಅವರು ಗುರುತಿಸಿ ಕರೆದಿದ್ದಾರೆ. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ
Advertisement
Advertisement
ಅಮಿತ್ ಶಾ ಜೊತೆ ಕೆಲ ಕಾಲ ಪ್ರಚಾರದಲ್ಲಿ ಜಾರಕಿಹೊಳಿ ಅವರು ಭಾಗಿಯಾಗಿದ್ದರು. ಈ ಸಮಯ ಅಮಿತ್ ಶಾ ಅವರನ್ನು ಜಾರಕಿಹೊಳಿ ಗೋಕಾಕ್ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನ ನೀಡಿದ್ದಾರೆ. ಅದಕ್ಕೆ ಅವರು ‘ಆಯೇಂಗೆ ಆಯೇಂಗೆ'(ಬರುತ್ತೇನೆ) ಎಂದು ತಿಳಿಸಿದ್ದಾರೆ.
Advertisement
ರಾತ್ರಿ ಭೋಜನಕೂಟ ವೇಳೆ ಸಿಗೋಣ ಎಂದು ಜಾರಕಿಹೊಳಿ ಅವರಿಗೆ ಅಮಿತ್ ಶಾ ಅವರು ತಿಳಿಸಿದ್ದು, ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಗೋವಾ ಸಿಎಂ ಪ್ರಮೋದ್ ಸಾವಂತ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?
Advertisement
ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಯನ್ನು ಮತ್ತೆ ಧಕ್ಕಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗಾಗಿ ವರಿಷ್ಠರನ್ನು ಭೇಟಿಯಾಗಿದ್ದರು. ಇದರ ಮಧ್ಯೆಯೇ ತಮಗೆ ಖಾತೆ ನೀಡುವ ಸಂಬಂಧ ವರಿಷ್ಠರ ಗಮನ ಸೆಳೆಯಲು ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ.