ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ `ಕಾಂತಾರ’ (Kantara Film) ಸಿನಿಮಾ ಹವಾ ಇನ್ನೂ ಮುಗಿದಿಲ್ಲ. ವಿಶ್ವಾದ್ಯಂತ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಇದೀಗ ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಮಾತನಾಡಿದ್ದಾರೆ. ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಪಾಲ್ಗೊಂಡ ವೇಳೆ ಅಮಿತ್ ಶಾ ಅವರು ಕಾಂತಾರ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ದಕ್ಷಿಣ ಕನ್ನಡದಲ್ಲಿನ ಸಂಸ್ಕೃತಿ ಬಗ್ಗೆ ತಿಳಿಯಿತು ಎಂದು ಮಾತನಾಡಿದ್ದಾರೆ.
ಕನ್ನಡದ `ಕಾಂತಾರ’ (Kantara) ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. 400 ಕೋಟಿ ಕಲೆಕ್ಷನ್ ಮಾಡಿ ಹಿಸ್ಟರಿ ಕ್ರಿಯೇಟ್ ಮಾಡಿದೆ. ಪರಭಾಷಿಕರು `ಕಾಂತಾರ’ ಚಿತ್ರ ನೋಡಿ ಭೇಷ್ ಎಂದಿದ್ದು ಆಗಿದೆ. ಹೀಗಿರುವಾಗ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡ ಅಮಿತ್ ಶಾ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪುತ್ತೂರು ಇದು ಪವಿತ್ರ ಭೂಮಿಯಾಗಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ವಿಶ್ವದಲ್ಲಿ ಪ್ರಸಿದ್ಧಿಯಾಗಿದೆ. ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸುಹೊಕ್ಕಿದೆ. ಈಗಷ್ಟೇ ನಾನು `ಕಾಂತಾರ’ ನೋಡಿದೆ. ದಕ್ಷಿಣ ಕನ್ನಡದಲ್ಲಿನ ಸಂಸ್ಕೃತಿ ಯಾವ ರೀತಿ ಮೇಳೈಸಿದೆ ಅನ್ನೋದು ತಿಳಿಯಿತು ಎಂದು ಅಮಿತ್ ಶಾ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಇನ್ನೂ `ಕಾಂತಾರ’ ಸಕ್ಸಸ್ ನಂತರ ಚಿತ್ರದ ಪ್ರೀಕ್ವೆಲ್‌ಗೆ ರಿಷಬ್ ಶೆಟ್ಟಿ ಅವರು ಸಕಲ ಸಿದ್ಧತೆ ಮಾಡ್ತಿದ್ದಾರೆ. ಸಿನಿಮಾ ಕಥೆ ರೆಡಿ ಮಾಡ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಬಗ್ಗೆ ಅಪ್‌ಡೇಟ್ ಕೊಡಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k