ಮುಂಬೈ: ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ.
ಅಮಿತ್ ಶಾ ಪಕ್ಷದ ಸಭೆ ಉದ್ದೇಶಿಸಿ ಮುಂಬೈಗೆ ಒಂದು ದಿನ ಭೇಟಿ ನೀಡಿದ್ದರು. ಈ ವೇಳೆ ಭಾನುವಾರ ಸಂಜೆ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅಮಿತ್ ಶಾ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಬೆಂಬಲ ನೀಡುವಂತೆ ಮಂಗೇಶ್ಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ರಾಸ್ಸಾಬೆಬ್ ಡಾನ್ವೆ ಮತ್ತು ಮುಂಬೈನ ಯುನಿಟ್ ಪಕ್ಷದ ಅಧ್ಯಕ್ಷ ಆಶಿಶ್ ಶೆಲರ್ ಅವರು ಇದ್ದರು.
Advertisement
BJP President Amit Shah meets Lata Mangeshkar in Mumbai, as part of party's 'Sampark se Samarthan' campaign. CM Devendra Fadnavis is also present. pic.twitter.com/XPsm3PLp4s
— ANI (@ANI) July 22, 2018
Advertisement
ಜೂನ್ 6 ರಂದು, ಮಂಗೇಶ್ಕರ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. `ಶಾ ಅವರು ಭೇಟಿ ಕುರಿತು ನನ್ನ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಆದ್ರೆ ಆರೋಗ್ಯದ ಸಮಸ್ಯೆಯಿಂದ ಭೇಟಿಯಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಮತ್ತೆ ಮುಂಬೈಗೆ ಬಂದಾಗ ತನ್ನನ್ನು ಭೇಟಿ ಮಾಡುವಂತೆ ಮನವಿ’ ಕೂಡ ಮಾಡಿದ್ದರು.
Advertisement
ಭಾನುವಾರ ನಡೆದ ಸಭೆಯಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಪುಸ್ತಕವೊಂದನ್ನು ಶಾ ಅವರು ಮಂಡಿಸಿದ್ದಾರೆ.
ಜೂನ್ 6 ರಂದು ನಟಿ ಮಾಧುರಿ ದೀಕ್ಷಿತ್ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಭೇಟಿ ಮಾಡಿದ್ದು, ಅವರಲ್ಲಿಯೂ ಕೂಡ “ಸಂಪರ್ಕ್ ಫಾರ್ ಸಮರ್ಥನ್” ಅಭಿಯಾನಕ್ಕೆ ಭಾಗಿಯಾಗುವಂತೆ ಕರೆ ನೀಡಿದ್ದರು. ಬಳಿಕ ಅದೇ ದಿನ ಮಂಗೇಶ್ಕರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಮಂಗೇಶ್ಕರ್ ಅವರಿಗೆ ಫುಡ್ ಪಾಯಿಷನ್ ಆಗಿದ್ದು, ಆರೋಗ್ಯ ಸಮಸ್ಯೆಯಾಗಿತ್ತು. ಆದ್ದರಿಂದ ಅಂದಿನ ಭೇಟಿಯನ್ನು ಅಮಿತ್ ಶಾ ಅವರು ಕ್ಯಾನ್ಸಲ್ ಮಾಡಿದ್ದರು.