ಬೆಂಗಳೂರು: ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಈ ಬಾರಿ ಸೋಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ಲಾನ್ ಮಾಡಿದ್ದಾರೆ. ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ತನ್ನ ಆಪ್ತನಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ಬಿಟಿಎಂ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ನಿಯೋಜಿಸಿದ್ದಾರೆ.
ಇಂದು ಬೆಂಗಳೂರಿಗೆ ಭೂಪೇಂದ್ರ ಯಾದವ್ ಆಗಮಿಸಲಿದ್ದು, ಸಂಜೆ ಬಿಟಿಎಂ ಲೇಔಟ್ ಕ್ಷೇತ್ರದ ಮಹತ್ವದ ಸಭೆಯನ್ನು ಕರೆದಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಮತ್ತು ಶಾ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶ, ಗುಜರಾತ್‍ನಂತಹ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲು ತೆರೆಮರೆಯಲ್ಲಿ ಮುಖ್ಯಪಾತ್ರವನ್ನು ಭೂಪೇಂದ್ರ ಯಾದವ್ ವಹಿಸಿದ್ದರು.
Advertisement
ತಾನು ತೆರಳುವ ರಾಜ್ಯಕ್ಕೆ ಹೋಗುವ ಮೊದಲೇ ಆ ರಾಜ್ಯದಲ್ಲಿ ಬಿಜೆಪಿಯ ಸ್ಥಿತಿಗತಿ ಹೇಗಿದೆ ಎನ್ನುವ ಮಾಹಿತಿಯನ್ನು ಪಡೆದುಕೊಂಡು ನಂತರ ಅಲ್ಲಿಗೆ ಭೇಟಿ ನೀಡುವುದು ಭುಪೇಂದ್ರ ಯಾದವ್ ಕಾರ್ಯಶೈಲಿ. ಯಾದವ್ ನೀಡಿದ ವರದಿಯನ್ನು ಇಟ್ಟುಕೊಂಡು ಚುನಾವಣಾ ರಣರಂಗಕ್ಕೆ ಇಳಿಯುವುದು ಶಾ ತಂತ್ರ. ಈ ಕಾರಣಕ್ಕೆ ಶಾ ಭೂಪೇಂದ್ರ ಯಾದವ್ ಅವರನ್ನು ರಾಜ್ಯ ಚುನಾವಣೆಗೆ ನಿಯೋಜಿಸಿದ್ದಾರೆ.