Connect with us

Latest

ತಮಿಳು, ಬಂಗಾಳಿಗಳ ಮನಗೆಲ್ಲಲು `ಭಾಷಾ’ ಬಾಣ ಪ್ರಯೋಗಿಸಲಿದ್ದಾರೆ ಅಮಿತ್ ಶಾ!

Published

on

ನವದೆಹಲಿ: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಣತತಂತ್ರ ಹೂಡಿದ್ದಾರೆ.

ಹೌದು. ಈ ಎರಡು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲೆಂದೇ ಅಮಿತ್ ಶಾ ತಮಿಳು ಹಾಗೂ ಬಂಗಾಳಿ ಭಾಷೆಗಳನ್ನು ಕಲಿಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲ ಕಡಿಮೆ ಇದ್ದು, ಪ್ರತಿ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಜಯಗಳಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಜಯಗಳಿಸುತ್ತಿವೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ಈಗ ಬಿಜೆಪಿಯ ಚುನಾವಣಾ ಚಾಣಕ್ಯ ಸಿದ್ಧತೆ ನಡೆಸುತ್ತಿದ್ದಾರೆ. ತವರು ರಾಜ್ಯವನ್ನು ಮತ್ತೊಮ್ಮೆ ಗೆಲ್ಲುವ ರಣತಂತ್ರದ ನಡುವೆಯೂ `ಭಾಷಾ’ ಅಧ್ಯಯನದಲ್ಲಿ ಅಮಿತ್ ಶಾ ಬ್ಯುಸಿಯಾಗಿರುವುದು ಇದೀಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ಎರಡು ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಜನರೊಂದಿಗೆ ವ್ಯವಹರಿಸಿದ್ರೆ ಚುನಾವಣೆಗೆ ಲಾಭ ಎನ್ನುವ ನಿಟ್ಟಿನಲ್ಲಿ ಶಾ ಈ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾ ಅಸ್ಸಾಂ, ಮಣಿಪುರ ಭಾಷೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ಒಟ್ಟಿನಲ್ಲಿ ಗುಜರಾತ್ ಚುನಾವಣೆಯ ಬ್ಯುಸಿ ನಡುವೆಯೂ ದಕ್ಷಿಣದತ್ತ ಅಮಿತ್ ಶಾ ಕಣ್ಣು ಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

ಈಗಾಗಲೇ ಶಾ ಅವರಿಗೆ ತಮಿಳು, ಬೆಂಗಾಳಿ, ಅಸ್ಸಾಂ ಹಾಗೂ ಮಣಿಪುರಿ ಭಾಷೆಗಳನ್ನು ಕಲಿಸಲು ವೃತ್ತಿಪರ ಶಿಕ್ಷಕರು ಆಯ್ಕೆಯಾಗಿದ್ದು, ಶಾ ತಮ್ಮ ಭಾಷಾ ಕಲಿಕೆಯನ್ನು ಮುಂದುವರಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರ ತರಗತಿಗಳು ನಡೆಯುತ್ತಿವೆ. ಸದ್ಯಕ್ಕೆ ಶಾ ಎರಡೂ ಭಾಷೆಗಳಲ್ಲಿ ಮಾತನಾಡುವಷ್ಟು ಕಲಿತಿದ್ದಾರೆ. ಆದರೆ ನಿರರ್ಗಳವಾಗಿ ಮಾತನಾಡಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ತಮಿಳುನಾಡು ಹಾಗೂ ಬಂಗಾಳ ರಾಜ್ಯದಲ್ಲೂ ಗೆದ್ದು, ಬಿಜೆಪಿ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಅಮಿತ್ ಶಾ ಈ ಉಪಾಯ ಹೂಡಿದ್ದಾರೆ. ಆಯಾ ರಾಜ್ಯದ ಭಾಷೆಯಲ್ಲೇ ಜನರೊಂದಿಗೆ ಮಾತನಾಡಿದ್ರೆ ಮಾತ್ರ ಜನ ಇನ್ನೂ ತಮ್ಮೊಂದಿಗೆ ಹತ್ತಿರವಾಗುತ್ತಾರೆ. ಹೀಗೆ ಮಾಡಿದ್ದಲ್ಲಿ ತಮ್ಮ ಪಕ್ಷಕ್ಕೆ ಜನ ಮತ ನೀಡಬಹುದೆಂಬ ಉದ್ದೇಶ ಅವರದ್ದಾಗಿದೆ.

https://www.youtube.com/watch?v=wVLDqd8Tgaw&feature=youtu.be&a=

Click to comment

Leave a Reply

Your email address will not be published. Required fields are marked *