ಬೆಂಗಳೂರು: ಆರಂಭದಲ್ಲಿ ಕಾಂಗ್ರೆಸ್ (Congress) ನಂತರ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕೇಂದ್ರದ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಅವರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ಮೊದಲ ಆರು ವರ್ಷ ಕಾಂಗ್ರೆಸ್ ಸರ್ಕಾರ ನಂತರ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ (Congress JDS Coalition Govt) ಕರ್ನಾಟಕದಲ್ಲಿ ಇತ್ತು. ಕರ್ನಾಟಕ (Karnataka) ಬಿಟ್ಟು ದೇಶದೆಲ್ಲೆಡೆ ಮೋದಿ (Narendra Modi) ಅವರ ಯೋಜನೆಗಳು ಜಾರಿಯಾಗುತ್ತಿದ್ದವು. ಯಾಕೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಭಯ ಇತ್ತು. ಮೋದಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದರೆ ಮೋದಿ ಹಾಗೂ ಬಿಜೆಪಿಗೆ ಕರ್ನಾಟಕದಲ್ಲಿ ಜನಪ್ರಿಯತೆ ಸಿಗುತ್ತೆ ಎಂಬ ಭಯ ಇತ್ತು ಎಂದು ತಿಳಿಸಿದರು.
Advertisement
Advertisement
ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ಕಳೆದ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನು ಪ್ರತಿ ಗ್ರಾಮಕ್ಕೂ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕರ್ನಾಟಕದಲ್ಲಿ ಸುರಕ್ಷತೆಯ ವಿಚಾರ ಬಹಳ ಮಹತ್ವಪೂರ್ಣವಾಗಿದೆ. ಈಗ ನಾನು ಮಂಗಳೂರಿನಲ್ಲಿದ್ದೇನೆ. ಕರ್ನಾಟಕದಾದ್ಯಂತ ಪಿಎಫ್‌ಐ ಭಯ ಇತ್ತು. ಮೋದಿ ಸರ್ಕಾರ ಒಂದೇ ದಿನದಲ್ಲಿ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿತು. ಪಿಎಫ್‌ಐ ಮುಖಂಡರನ್ನೆಲ್ಲ ಜೈಲಿಗಟ್ಟಿತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಈ ಬಾರಿಯೂ ಬಿಜೆಪಿ ಸ್ಪಷ್ಟವಾಗಿ ಅಧಿಕಾರಕ್ಕೆ ಏರುತ್ತದೆ ಎಂದರು. ಇದನ್ನೂ ಓದಿ: ಜೆಡಿಎಸ್‌ಗೆ ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್ ಖಾತೆಗೆ ಸೇರುತ್ತೆ: ಮೋದಿ
Advertisement
Advertisement
ಅಭಿವೃದ್ಧಿ ನೋಡಿ ಮತ ಹಾಕಿ ಅನ್ನೋದು ಬಿಜೆಪಿ ಪ್ರಚಾರದ ಮುಖ್ಯಾಂಶ. ನಿಮ್ಮ ಯೋಜನೆಗಳು ಈಗಾಗಲೇ ಶೇ.85ರಷ್ಟು ಜನರಿಗೆ ತಲುಪಿದೆ ಅಂತಾದರೆ, ನೆಪಕಷ್ಟೇ ಚುನಾವಣೆ ನಡೆಯಲಿದೆ ಎಂಬರ್ಥವೇ ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ಬಿಜೆಪಿಗೇ ಮತ ಹಾಕುತ್ತಾರೆ ಅಂತ ನಾನು ಭಾವಿಸುವುದಿಲ್ಲ. ಆದರೆ ಬಹುಪಾಲು ಜನರು ಬಿಜೆಪಿಯ ಪರ ನಿಲ್ಲಲಿದ್ದಾರೆ ಎಂದು ಉತ್ತರಿಸಿದರು.
ಬಿಜೆಪಿ ಉತ್ತುಂಗದಲ್ಲಿದ್ದಾಗಲೂ ಕರ್ನಾಟಕದಲ್ಲಿ ಪೂರ್ಣ ಬಹುಮತ ಸಿಕ್ಕಿಲ್ಲ. ಈ ಬಾರಿ ಬಹುಮತ ಹೇಗೆ ಬರುತ್ತೆ ಎಂದು ಕೇಳಿದ್ದಕ್ಕೆ, ಮೊದಲೇ ಹೇಳಿದಂತೆ ನಮ್ಮ ಜನಪರ ಯೋಜನೆಗಳು ಫಲಾನುಭವಿಗಳಿಗೆ ತಲುಪಿದೆ. ಜನರು ಸುರಕ್ಷತೆಯಿಂದಿದ್ದಾರೆ. ರೈತರಿಗಾಗಿ 14 ಪ್ರಮುಖ ನೀರಾವರಿ ಯೋಜನೆ ತಂದಿದ್ದೇವೆ. ರೈತರಲ್ಲಿ ಅತ್ಮಾವಿಶ್ವಾಸ ವೃದ್ಧಿಸಿದೆ ಎಂದು ಹೇಳಿದರು. ಡಬಲ್ ಎಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.