ನವದೆಹಲಿ: ಗೃಹ ಸಚಿವ ಅಮಿತ್ ಶಾ (Amit Shah) ಅವರು ಚುನಾವಣೆಯಲ್ಲಿ ನಿರತರಾಗಿದ್ದಾರೆ. ಇತ್ತ ದೆಹಲಿಯು (New Delhi) ದರೋಡೆಕೋರರ ನಿಯಂತ್ರಣದಲ್ಲಿದ್ದು, ಅಪರಾಧ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಜಿ ಸಿಎಂ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಅಮಿತ್ ಶಾ ಅವರ ಜವಾಬ್ದಾರಿಯಾಗಿದೆ. ಆದರೆ ಅವರು ಚುನಾವಣೆಗಳಲ್ಲಿ ನಿರತರಾಗಿದ್ದಾರೆ. ದೆಹಲಿ ದರೋಡೆಕೋರರ ನಿಯಂತ್ರಣದಲ್ಲಿದೆ. ಶೂಟರ್‌ಗಳು ಅವರ ಹಿಂದಿನ ಮಾಸ್ಟರ್ ಮೈಂಡ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಾಮಾಣಿಕರನ್ನ ಸಿಎಂ ಮಾಡ್ಬೇಕು ಅಂದ್ರೆ ನನ್ನ ಹೆಸರೇ ಮೊದಲು ಬರುತ್ತೆ: ಯತ್ನಾಳ್
Advertisement
Advertisement
ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಶನಿವಾರ ಬೆಳಗ್ಗೆ ವಿಶ್ವಾಸ್ ನಗರದಲ್ಲಿ ಉದ್ಯಮಿ ಸುನೀಲ್ ಜೈನ್ ಅವರನ್ನು ಹಗಲು ಹೊತ್ತಿನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಅಪರಾಧಿಗಳು ಹೇಗೆ ನಿರ್ಭೀತರಾದರು? ಬೆದರಿಕೆ ಕರೆಗಳಿಂದ ಹಲವು ಪ್ರಮುಖರು ದೆಹಲಿಯನ್ನು ತೊರೆಯುವ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಬಿಸಿನೆಸ್ ಪಾರ್ಟ್ನರ್
Advertisement
ದೆಹಲಿಯಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿ ಪೊಲೀಸರು ದೆಹಲಿ ನಿವಾಸಿಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ದೆಹಲಿ ಮತದಾರರು ಶಾಲೆ ಮತ್ತು ಆಸ್ಪತ್ರೆಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ. ಮತದಾರರು ಬಿಜೆಪಿಗೆ ನೀಡಿದ ಏಕೈಕ ಜವಾಬ್ದಾರಿ ಕಾನೂನು ಮತ್ತು ಸುವ್ಯವಸ್ಥೆ. ಅದನ್ನು ಅವರು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಣಿಪಾಲ ಬಾಣಸಿಗನ ಸಾವಿಗೆ ಬಿಗ್ ಟ್ವಿಸ್ಟ್ – ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ?
Advertisement
ಗ್ಯಾಂಗ್ ವಾರ್‌ಗಳು, ಸುಲಿಗೆ ಬೆದರಿಕೆಗಳು ಮತ್ತು ಪಾವತಿಸದ ಸಾಲಗಳ ಮೇಲೆ ಗುಂಡು ಹಾರಿಸುವುದನ್ನು ಪ್ರಚಲಿತ ಸಮಸ್ಯೆಗಳೆಂದು ಸೂಚಿಸಿದ್ದರಿಂದ ನಿವಾಸಿಗಳು, ವ್ಯಾಪಾರಿಗಳು, ಮಹಿಳೆಯರು ಮತ್ತು ವೃದ್ಧರು ದೆಹಲಿಯಲ್ಲಿ ನಿರಂತರ ಭಯದಿಂದ ಬದುಕುತ್ತಿದ್ದಾರೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದರು. ಇದನ್ನೂ ಓದಿ: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ