ಚಿಕ್ಕಮಗಳೂರು: ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ (HD Kumaraswamy) ಟಾಸ್ಕ್ ಕೊಟ್ಟಿದ್ದು, ಅವರು ಅದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ (M Lakshman) ಹೆಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸುಪಾರಿ ಕೊಟ್ಟಿದ್ದಾರೆ. ಬೆಳಗ್ಗೆ ಎದ್ದರೆ ಪ್ರೆಸ್‌ಮೀಟ್ ಮಾಡಬೇಕು. ಸಂಜೆ ಪ್ರೆಸ್‌ಮೀಟ್ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೈಯ್ಯಬೇಕು. ಇದೇ ಅವರು ಕೊಟ್ಟಿರುವ ಸುಪಾರಿ. ಕುಮಾರಸ್ವಾಮಿಯವರ ಕೆಲಸವೂ ಅಷ್ಟೇ. ಆ ಕೆಲಸವನ್ನು ಹೆಚ್‌ಡಿ ಕುಮಾರಸ್ವಾಮಿಯವರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ತನಿಖೆ ನಡೆದರೆ ಮತ್ತೆ ಜೈಲಿಗೆ ಹೋಗ್ತಾರೆ: ಡಿಕೆಶಿಗೆ ಖೂಬಾ ಟಾಂಗ್
ಕುಮಾರಸ್ವಾಮಿಯವರೇ, ಪೆನ್‌ಡ್ರೈವ್ ತೋರಿಸಿದ್ದಿರಲ್ಲ, ಆ ಪೆನ್‌ಡ್ರೈವ್ ಕಥೆ ಏನಾಯಿತು? ದಯಮಾಡಿ ಹೇಳಿ. ಕುಮಾರಸ್ವಾಮಿಯವರು ಪ್ರತಿದಿನ ಸುದ್ದಿಗೋಷ್ಠಿ ಮಾಡುತ್ತಾರೆ. ಆದರೆ, ಎಲ್ಲಿಯಾದರೂ, ಯಾವುದಾದರೂ ಒಂದು ವಿಷಯದ ಬಗ್ಗೆ ಲಾಜಿಕ್ ಎಂಡ್‌ಗೆ ತೆಗೆದುಕೊಂಡು ಹೋಗುತ್ತಾರಾ? ಮಾಧ್ಯಮಗಳಿಗೆ ಬೆಳಗ್ಗೆಯಿಂದ ಸಂಜೆವರೆಗೂ ಚರ್ಚೆಗೆ ವಸ್ತು ಕೊಡುತ್ತಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಇಂದು ಜನತಾದರ್ಶನ
ಯತೀಂದ್ರ ಅವರು ಸಿಎಸ್‌ಆರ್ ಫಂಡ್ ಬಗ್ಗೆ ಮಾತನಾಡಿರುವುದನ್ನೇ ಕುಮಾರಸ್ವಾಮಿಯವರು ದಂಧೆ, ದಂಧೆ ಎಂದು ಹೇಳುತ್ತಿದ್ದಾರೆ. 40% ಆಧಾರದಲ್ಲಿ ವರ್ಗಾವಣೆ ಮಾಡುವ ಚಾಳಿ ಬೆಳೆಸಿಕೊಂಡಿದ್ದು ಬಿಜೆಪಿ (BJP) ಮತ್ತು ಜೆಡಿಎಸ್. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಯಾರಾದರೂ ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡಿದ್ದಾರಾ? ಮಾಡಿದ್ದರೆ ಹೇಳಿ. ಹಣ ಪಡೆದು ವರ್ಗಾವಣೆ ಮಾಡಿದ್ದರೆ ಈ ಹೊತ್ತಿಗೆ ಹೊರಗಡೆ ಬರುತ್ತಿತ್ತು ಎಂದು ಬಿಜೆಪಿ ಹಾಗೂ ಜೆಡಿಎಸ್ (JDS) ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಸನಾತನ ಧರ್ಮ ಕ್ಷೀಣಿಸಲು ಒಂದು ಸಮುದಾಯದ ಪ್ರಯತ್ನ: ಆರಗ ಜ್ಞಾನೇಂದ್ರ