ಚುನಾವಣಾ ಅಧಿಕಾರಿಗಳಿಂದ ಅಮಿತ್ ಶಾ ವಿಮಾನ ಪರಿಶೀಲನೆ

Public TV
1 Min Read
amith shah hubali

ಹುಬ್ಬಳ್ಳಿ: ರಾಜ್ಯ ವಿಧಾನಸಭೆಯ ಬಿಸಿ ದಿನದಿಂದಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಇದರ ಬೆನ್ನಲ್ಲೇ ಶಿಸ್ತಿನ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.

vlcsnap 2018 04 03 19h05m16s250

ಇದರ ಭಾಗವಾಗಿ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದ್ದು, ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಯಾಣ ಬೆಳೆಸಿದ ವಿಮಾನವನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಚುನಾವಣಾ ಪ್ರಚಾರವಾಗಿ ಹುಬ್ಬಳ್ಳಿಗೆ ವಿಶೇಷ ವಿಮಾನ ಮೂಲಕ ಅಮಿತ್ ಶಾ ಆಗಮಿಸಿದ್ದರು. ಈ ವೇಳೆ ಚುನಾವಣಾ ಸಂಚಾರ ವಿಚಕ್ಷಣಾದಳ ಅಧಿಕಾರಿಗಳಿಂದ ವಿಮಾನದ ತಪಾಸಣೆ ನಡೆಸಲಾಯಿತು. ಅಧಿಕಾರಿಗಳಾದ ಆರ್ ಎನ್ ಈರೇಗೌಡ, ಹೆಚ್.ಜಿ ಯೋಗಾನಂದ, ಎಸ್ ಎ ಕರಪಾಲಿ ನೇತೃತ್ವದಲ್ಲಿ ತಪಾಸಣೆ ನಡೆಯಿತು.

AMITH SHAA 6

 

Share This Article
Leave a Comment

Leave a Reply

Your email address will not be published. Required fields are marked *