ಬೆಂಗಳೂರು: ಬಿಜೆಪಿಯ (BJP) ಆಪರೇಷನ್ ಓಲ್ಡ್ ಮೈಸೂರು (Old Mysuru) ಬಗ್ಗೆ ವರಿಷ್ಠರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮೈಸೂರು ಕರ್ನಾಟಕದಲ್ಲಿ ಬಿಜೆಪಿ ಟಾರ್ಗೆಟ್ 35+ ಫಿಕ್ಸ್ ಮಾಡ್ಕೊಂಡಿದೆ. ಆದ್ರೆ ಈ ಭಾಗದಲ್ಲಿ ಆಪರೇಷನ್ ಕಮಲ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್ ಗರಂ ಆಗಿದೆ.
Advertisement
ನಿರೀಕ್ಷಿತ ಮಟ್ಟದಲ್ಲಿ ಆಪರೇಷನ್ ಕಮಲ ನಡೀತಿಲ್ಲ. ಆಪರೇಷನ್ ಓಲ್ಡ್ ಮೈಸೂರು ತೃಪ್ತಿದಾಯಕವಾಗಿಲ್ಲ ಅಂತ ವರಿಷ್ಠರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ಬಾರಿ ಹೆಚ್ಚಿನ ಫೋಕಸ್ ಮಾಡಿರುವ ಮಂಡ್ಯ, ಮೈಸೂರು, ಹಾಸನ, ರಾಮನಗರ ಜಿಲ್ಲೆಗಳಿಂದ ಹೆಚ್ಚಿನ ಪ್ರಭಾವಿಗಳು ಬಿಜೆಪಿ ಸೇರಲು ಮುಂದೆ ಬಂದಿಲ್ಲ. ಈ ಜಿಲ್ಲೆಗಳ ಪ್ರಭಾವಿಗಳನ್ನು ಸೆಳೆಯಲು ರಾಜ್ಯ ಬಿಜೆಪಿ ನಾಯಕರು ವಿಫಲರಾಗಿದ್ದಾರೆಂದು ಹೈಕಮಾಂಡ್ ಸಿಟ್ಟಾಗಿದೆ. ಜೊತೆಗೆ ಅಮಿತ್ ಶಾ (Amit Shah) ರಾಜ್ಯ ನಾಯಕರಿಗೆ ನೀಡಿದ್ದ ಆಪರೇಷನ್‍ನ ಟಾಸ್ಕ್ ಕಂಪ್ಲೀಟ್ ಮಾಡಿಲ್ಲದಿರುವುದಕ್ಕೂ ರಾಜ್ಯ ನಾಯಕರು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಹಾಲಿ ಮಾಜಿ ಶಾಸಕರ ಸೇರ್ಪಡೆ ಯಾವಾಗ, ಇನ್ನೂ ಆಗಿಲ್ಲ ಯಾಕೆ?
ಆರಂಭ ಶೂರತ್ವ ಮಾತ್ರ ತೋರಿಸಿದ್ರಿ, ನಂತರ ವಿಫಲರಾಗಿದೀರಿ ಅಂತ ದೆಹಲಿ ದೊರೆಗಳು ಚಾಟಿ ಬೀಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಆಪರೇಷನ್ ಕಮಲದ ಕಂಪ್ಲೀಟ್ ರಿಪೋರ್ಟ್ ಕೊಡುವಂತೆ ಹೈಕಮಾಂಡ್ ತಾಕೀತು ಮಾಡಿದೆ. ಆಪರೇಷನ್‍ಗೆ ಲಿಸ್ಟ್ ಮಾಡಿಕೊಂಡ ಪ್ರಭಾವಿಗಳು ಯಾರು? ಅವರ ಸೇರ್ಪಡೆ ವಿಳಂಬ ಯಾಕೆ? ಎಲ್ಲಿ, ಏನು ತೊಡಕಾಗಿದೆ? ಎಲ್ಲಿ ಎಡವಿದ್ದೀರಿ ಅಂತ ವರಿಷ್ಠರು ವಿವರಣೆ ಕೇಳಿದ್ದಾರೆ.
Advertisement
Advertisement
ಆಪರೇಷನ್ ಓಲ್ಡ್ ಮೈಸೂರು ಪ್ರಗತಿ ಕಾಣದ ಹಿನ್ನೆಲೆಯಲ್ಲಿ, ಸಮಯ ವ್ಯರ್ಥ ಆಗದಂತೆ ತಡೆಯಲು ವರಿಷ್ಠರೇ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಪಕ್ಷ ಸೇರಲು ಮನಸು ತೋರಿರುವವರ ಜೊತೆ ಖುದ್ದು ಅಮಿತ್ ಶಾ ನೇರ ಟಾಕ್ ನಡೆಸಲು ಪ್ಲಾನ್ ರೂಪಿಸಲಾಗಿದೆ. ರಾಜ್ಯ ಘಟಕದಿಂದ ವರದಿ ಪಡೆದು ಆಯ್ದ ಪ್ರಭಾವಿಗಳ ಜೊತೆ ಶಾ ಚರ್ಚೆ ನಡೆಸುವ ಸಾಧ್ಯತೆ ಇದೆ.
ಹಳೇ ಮೈಸೂರು ಭಾಗದಿಂದ ಬಿಜೆಪಿ ಸೇರಿದ ಪ್ರಭಾವಿಗಳು:
ತುಮಕೂರಿನಿಂದ – ಮುದ್ದಹನುಮೇಗೌಡ, ಕೋಲಾರದಿಂದ – ವರ್ತೂರು ಪ್ರಕಾಶ್, ಮಂಜುನಾಥ್ ಗೌಡ., ಮಂಡ್ಯದಿಂದ – ಲಕ್ಷ್ಮಿ ಅಶ್ವಿನ್ ಗೌಡ, ಅಶೋಕ್ ಜಯರಾಂ, ಸಚ್ಚಿದಾನಂದ., ಬೆಂಗಳೂರು ಗ್ರಾಮಾಂತರದಿಂದ – ಪಿಳ್ಳ ಮುನಿಶಾಮಪ್ಪ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k