ಬೆಂಗಳೂರು: ಮುಂದಿನ ಒಲಿಂಪಿಕ್‌ಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿ ನಮ್ಮದಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶಯ ವ್ಯಕ್ತಪಡಿಸಿದ್ದಾರೆ.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್-2021 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2014ರ ಮುಂಚೆ ಕ್ರಿಕೆಟ್‌ಗೆ ಮಾನ್ಯತೆ ದೇಶದಲ್ಲಿ ಹೆಚ್ಚು ಇತ್ತು. ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ನಮ್ಮ ಕ್ರೀಡಾಪಟುಗಳು ಪದಕ ತರುತ್ತಿರಲಿಲ್ಲ. ಮೋದಿ ಅವರು 2014ರಲ್ಲಿ ಆಡಳಿತಕ್ಕೆ ಬಂದ ಮೇಲೆ ಕ್ರೀಡೆಗೆ ಮೊದಲ ಆದ್ಯತೆ ಕೊಟ್ಟರು. ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟರು. ಇವತ್ತು ನಮ್ಮ ಕ್ರೀಡಾಪಟುಗಳು ಪದಕ ತರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್
Advertisement
Advertisement
ನಮ್ಮ ಕ್ರೀಡಾ ಸಚಿವರು ಅತ್ಯುತ್ತಮ ಕ್ರೀಡಾಕೂಟ ವ್ಯವಸ್ಥೆ ಮಾಡಿದ್ದಾರೆ. ಉತ್ತಮ ಕೋಚ್ ವ್ಯವಸ್ಥೆ, ಎಲ್ಲಾ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಹೀಗಾಗಿ ದೇಶದಲ್ಲಿ ಇವತ್ತು ಕ್ರೀಡಾ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. ಕ್ರೀಡಾ ಜೀವನದ ಅಂಗ. ಕ್ರೀಡೆ ಗೊತ್ತಿರುವವನು ಎಲ್ಲವನ್ನೂ ಎದುರಿಸುತ್ತಾನೆ. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಮೊದಲ ಪದಕ ತರಲು ಆಗ್ತಿರಲಿಲ್ಲ. ಇವತ್ತು ಪದಕ ಗಳು ನಮ್ಮ ದೇಶಕ್ಕೆ ಬರುತ್ತಿದೆ. ಇದು 2014 ನಂತರದ ಪರಿವರ್ತನೆ. ಅಲ್ಪ ಕಾಲದಲ್ಲಿ ಮೋದಿ ಅವರು ಈ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.
Advertisement
100 ವರ್ಷಗಳ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಟಾಪ್ 5ರ ಸ್ಥಾನದಲ್ಲಿ ಇರಬೇಕು ಅನ್ನೋ ಸಂಕಲ್ಪವನ್ನು ಮೋದಿ ಮಾಡಿದ್ದಾರೆ. ಹೀಗಾಗಿ ವಿವಿ ಗೇಮ್ ಪ್ರಾರಂಭ ಮಾಡಿದ್ದಾರೆ. ಕ್ರೀಡೆಗೆ ಉತ್ತಮ ಸೌಲಭ್ಯಗಳನ್ನು ನೀಡಿದ್ದಾರೆ. ಕ್ರೀಡೆಗೆ ಭಾರತದಲ್ಲಿ ಉಜ್ವಲ ಭವಿಷ್ಯ ಇದೆ ಅಂತ ಮೋದಿ ಈ ಕಾರ್ಯ ಮಾಡ್ತಿದ್ದಾರೆ. ಭಾರತೀಯ ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡುತ್ತಿದ್ದೇವೆ. ಯೋಗ, ಮಲ್ಲಕಂಬವನ್ನೂ ಕ್ರೀಡಾ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಕ್ಷಣ ಕ್ರಾಂತಿಯಲ್ಲಿ ಪ್ರಾದೇಶಿಕ ಭಾಷೆಗಳು ಮಹತ್ವದ ಪಾತ್ರ ವಹಿಸುತ್ತದೆ: ಅಮಿತ್ ಶಾ
Advertisement
ಗುಜರಾತ್‌ನಲ್ಲಿ ಮೋದಿ ಸ್ಟೇಡಿಯಂ ಮಾಡಿದೆವು. ಆದರೆ ವಿವಿಯಲ್ಲಿ ಎಲ್ಲಾ ಕ್ರೀಡೆಗಳ ವ್ಯವಸ್ಥೆ ಇದೆ. ಇದು ಹೆಮ್ಮೆಯ ವಿಚಾರ. ಮೋದಿ ಅವರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಂತಹ ಕ್ರೀಡಾಕೂಟಗಳಿಂದ ಪ್ರತಿಭೆಗಳು ಹೊರ ಬರುತ್ತವೆ. ಇಂತಹ ಕೆಲಸವನ್ನು ಮೋದಿ ಅವರು ಮಾಡುತ್ತಿದ್ದಾರೆ. ಮೋದಿ ಅವರ ಸಹಕಾರದಿಂದ ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್‌ಗಳಲ್ಲಿ ಹೆಚ್ಚು ಪದಕ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನ ಮತ್ತಷ್ಟು ಹೆಚ್ಚಳ ಮಾಡಲು ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕ ಸರ್ಕಾರದ 75 ಕ್ರೀಡಾಪಟುಗಳನ್ನು ದತ್ತು ಸ್ವೀಕಾರ ಮಾಡಿರುವ ಕಾರ್ಯಕ್ಕೆ ಅಮಿತ್ ಶಾ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ 75 ಕ್ರೀಡಾಪಟುಗಳಿಗೆ ವಿಶೇಷ ತರಬೇತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಹೀಗಾಗಿ ಸಿಎಂ ಹಾಗೂ ರಾಜ್ಯ ಸರ್ಕಾರದ ಕಾರ್ಯವನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮಿತ್ ಶಾ ಮಿಂಚಿನ ಸಂಚಾರ- ವಿದ್ಯಾರ್ಥಿಗಳಿಗೆ ಜೋಷ್ ತುಂಬಿದ ಕೇಂದ್ರ ಸಚಿವ
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಅನುರಾಗ್ ಠಾಕೂರ್, ಸಚಿವರಾದ ಅಶ್ವಥ್ ನಾರಾಯಣ, ಆರಗ ಜ್ಞಾನೇಂದ್ರ, ನಾರಾಯಣಗೌಡ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ನಟ ಸುದೀಪ್ ಪಾಲ್ಗೊಂಡಿದ್ದರು.