ನವದೆಹಲಿ: ಕನಾಟಕದಲ್ಲಿ ಪ್ರಾರಂಭವಾದ ಹಿಜಬ್ ವಿವಾದ ದೇಶವ್ಯಾಪಿ ಹರಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಹಿಜಬ್ ಬಗೆಗಿನ ಗಲಬೆ ಪ್ರಾರಂಭವಾಗಿ ತಿಂಗಳು ಮೇಲಾಗಿದೆ. ಇಲ್ಲಿಯ ವರೆಗೂ ಹಿಜಬ್ ವಿಚಾರವಾಗಿ ಎಲ್ಲಿಯೂ ಮಾತನಾಡಿರದ ಕೇಂದ್ರ ಸಚಿವ ಅಮಿತ್ ಶಾ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಎಲ್ಲಾ ಧರ್ಮದವರೂ ಶಾಲಾ-ಕಾಲೇಜಿನ ಸಮವಸ್ತ್ರ ಪಾಲಿಸಬೇಕು. ಸದ್ಯ ಹಿಜಬ್ ವಿವಾದ ಕೋರ್ಟ್‍ನಲ್ಲಿದ್ದು, ವಿಚಾರಣೆ ನಡಿಯುತ್ತಿದೆ. ಕೋರ್ಟ್ ಏನೇ ತೀರ್ಪು ನೀಡಿದರೂ ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ
Advertisement
Advertisement
ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಹಿಜಬ್ ಧರಿಸಿ ಬರದಂತೆ ಆದೇಶ ನೀಡಿದ್ದರೂ ಹಲವೆಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಕಾಲೇಜು ಆವರಣದಲ್ಲಿ ಈ ವಿಚಾರವಾಗಿ ಗಲಾಟೆಯಾಗಬಾರದೆಂಬ ಕಾರಣಕ್ಕೆ ಪೊಲೀಸರು ಕಾಲೇಜುಗಳ ಮುಂದೆ ಬೀಡುಬಿಟ್ಟಿದೆ. ಇದನ್ನೂ ಓದಿ: ಹಿಜಬ್ ವಿವಾದದ ನಡುವೆ ಮೈಸೂರು ಪ್ಯಾಲೇಸ್‍ನಲ್ಲಿ ನಮಾಜ್