ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ವಿಜಯ ಸಂಕಲ್ಪ ರಥಯಾತ್ರೆಗೆ (Vijay Sankalpa Rath Yatra) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಚಾಲನೆ ನೀಡಲಿದ್ದು, ಮಾರ್ಚ್ 3 ರಂದು ಅವರು ಬಸವಕಲ್ಯಾಣಕ್ಕೆ (Basavakalyan) ಬರಲಿದ್ದಾರೆ. ಭಾನುವಾರ ಪಕ್ಷದ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan), ಮಾರ್ಚ್ 3 ರಂದು 11 ಗಂಟೆಗೆ ಅಮಿತ್ ಶಾ ವಿಶೇಷ ವಿಮಾನದ ಮೂಲಕ ಬಸವಕಲ್ಯಾಣಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
Advertisement
ಅಮಿತ್ ಶಾ 11 ಗಂಟೆಗೆ ಬಸವಕಲ್ಯಾಣ ಭೇಟಿ ನೀಡಿದ ಬಳಿಕ 11:30ಕ್ಕೆ ಅನುಭವ ಮಂಟಪಕ್ಕೆ ಭೇಟಿ ನೀಡಿ, ಅಲ್ಲಿಂದಲ್ಲೇ ವಿಜಯ ಸಂಕಲ್ಪ ಯಾತ್ರೆ ರಥಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಬಸವಕಲ್ಯಾಣ ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ಮಾಡಿ ಸಮಾವೇಶದಲ್ಲಿ ಭಾಗಿಯಾಗುತ್ತಾರೆ ಎಂದರು. ಇದನ್ನೂ ಓದಿ: ಆಶಾ ಕಾರ್ಯಕರ್ತರಿಗೆ ವಿದೇಶಿ ಹಣ ಹಂಚಿದ ಶಾಸಕ ಜಮೀರ್
Advertisement
ಬಸವಕಲ್ಯಾಣ ಪಟ್ಟಣದ ಥೇರು ಮೈದಾನದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶ್ರೀರಾಮುಲು, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈ ಸಮಾವೇಶದಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
Advertisement
Advertisement
ಮಧ್ಯಾಹ್ನ 2 ಗಂಟೆಗೆ ಹುಮ್ನಾಬಾದ್, ಸಂಜೆ ಭಾಲ್ಕಿಯಲ್ಲಿ ಬಹಿರಂಗ ಸಮಾವೇಶ ನಡೆಲಿದ್ದು, 4 ಗಂಟೆ ವೇಳೆಗೆ ಔರಾದ್, ಬೀದರ್ ಉತ್ತರ ಹಾಗೂ ಬೀದರ್ ದಕ್ಷಿಣದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಸಚಿವ ಪ್ರಭು ಚವ್ಹಾಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ, ಅವರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಲ್ಲ : ಪ್ರಭು ಚವ್ಹಾಣ್ ಟಾಂಗ್