ಚೆನ್ನೈ: ತಮಿಳು ಮಾಧ್ಯಮದಲ್ಲೂ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸಿ ಎಂದು ತಮಿಳುನಾಡು (Tamil Nadu) ಸರ್ಕಾರಕ್ಕೆ ಗೃಹ ಸಚಿವ ಅಮಿತ್ ಶಾ (Amit Shah) ಮನವಿ ಮಾಡಿದರು.
ಚೆನ್ನೈನಲ್ಲಿ (Chennai) ಮಾತನಾಡಿದ ಅವರು, ತಮಿಳು (Tamil) ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ತಮಿಳು ವ್ಯಾಕರಣವು ವಿಶ್ವದ ಅತ್ಯಂತ ಪ್ರಾಚೀನ ವ್ಯಾಕರಣವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ಭಾಷೆಯನ್ನು ತಮಿಳುನಾಡು ಮಾತ್ರವಲ್ಲ, ರಾಷ್ಟ್ರದಲ್ಲೇ ಪ್ರಚಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
Advertisement
Advertisement
ದೇಶದ ಹಲವು ರಾಜ್ಯಗಳು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲಿ ಆರಂಭಿಸುವಂತೆ ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದರಿಂದ ತಮಿಳು ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಗ್ರಹಿಸಲು ಸಹಾಯ ಮಾಡುತ್ತದೆ. ಇದು ತಮಿಳಿನಲ್ಲಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜೊತೆಗೆ ಪ್ರಾಚೀನ ಭಾಷೆಗೆ ಉತ್ತಮ ಸೇವೆಯಾಗಿದೆ ಎಂದು ಹೇಳಿದರು.
Advertisement
Advertisement
ತಮಿಳು ಮಾಧ್ಯಮದಲ್ಲಿ 1,350 ಸೀಟುಗಳಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಸೂಚಿಸಲಾಗಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಇತ್ತೀಚಿಗೆ ನೀಡಿದ ಮಾಹಿತಿಯ ಪ್ರಕಾರ ತಮಿಳು ಮಾಧ್ಯಮದ ಶಿಕ್ಷಣಕ್ಕೆ 85 ಸೀಟುಗಳಲ್ಲಿ ಮಾತ್ರ ನೀಡುತ್ತಿದೆ ಎಂದ ಅವರು, ತಮಿಳುನಾಡು ಸರ್ಕಾರವು ಇನ್ನೂ ಹೆಚ್ಚು ಸೀಟನ್ನು ಒದಗಿಸುವತ್ತ ಗಮನಹರಿಸಿದರೆ ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‍ಗಳು ತಮಿಳು ಭಾಷೆಗೆ ಉತ್ತಮ ಸೇವೆಯಾಗಲಿದೆ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ
ಕೆಲ ತಿಂಗಳ ಹಿಂದೆ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಸಂಸದೀಯ ಸಮಿತಿಯ ಶಿಫಾರಸಿನ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಹಿಂದಿ ಹೇರಿಕೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದನ್ನೂ ಓದಿ: 150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ