ಕುಮಾರಕೃಪದಲ್ಲಿ ಬದ್ಧವೈರಿಗಳ ಸಮಾಗಮ- ವೇಣುಗೋಪಾಲ್ ಭೇಟಿ ವೇಳೆ ಅಮಿತ್ ಶಾ ರೂಂ ಬಳಿ ಹೋಗಿ ಖಾದರ್ ಕಕ್ಕಾಬಿಕ್ಕಿ

Public TV
1 Min Read
kumarakrupa khader

ಬೆಂಗಳೂರು: ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ರಾಜಕೀಯ ಸೋಜಿಗ ನಡೆದಿದೆ.

ಹೌದು. ಕುಮಾರಕೃಪ ಅತಿಥಿ ಗೃಹದಲ್ಲಿ ಬದ್ಧವೈರಿ ಕಾಂಗ್ರೆಸ್-ಬಿಜೆಪಿ ಜುಗಲ್‍ಬಂದಿ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಇಬ್ಬರೂ ಕುಮಾರಕೃಪ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದಾರೆ. ನೆಲಮಹಡಿಯಲ್ಲಿ ಅಮಿತ್ ಶಾ ಹಾಗೂ ಮೇಲಿನ ಮಹಡಿಯಲ್ಲಿ ವೇಣುಗೋಪಾಲ್ ಇದ್ದಾರೆ.

kumarakrupa 1

 

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭೇಟಿಗೆ ಬಂದ ಸಚಿವ ಯು.ಟಿ.ಖಾದರ್ ಅಮಿತ್ ಶಾ ಉಳಿದುಕೊಂಡಿದ್ದ ರೂಂ ಬಳಿ ತೆರಳುತ್ತಿದ್ದರು. ಬಳಿಕ ಅಮಿತ್ ಶಾ ಇರೋದು ತಿಳಿದು ಕಕ್ಕಾಬಿಕ್ಕಿಯಾದ ಯು.ಟಿ ಖಾದರ್ ವಾಪಸ್ ತೆರಳಿದ್ರು.

kumarakrupa 6

ವಾಕಿಂಗ್‍ಗೆ ಹೋಗಿದ್ದ ವೇಣುಗೋಪಾಲ್ ವಾಪಸ್ ಬಂದಿರಲಿಲ್ಲ. ಇದರ ಮಾಹಿತಿ ಇಲ್ಲದೆ ಖಾದರ್ ವೇಣುಗೋಪಾಲ್ ಭೇಟಿಗೆ ಬಂದಿದ್ದರು.

kumarakrupa 9

ಈ ನಡುವೆ ವೇಣುಗೋಪಾಲ ಭೇಟಿಯಾಗಲು ಬರುತ್ತಿರುವ ಕಾಂಗ್ರೆಸ್ ನಾಯಕರಿಗೆ ಇರುಸು-ಮುರುಸು ಉಂಟಾಗಿದೆ. ಅಮಿತ್ ಶಾ ಭದ್ರತೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರಿದ್ದಾರೆ. ಅಮಿತ್ ಶಾ ಭೇಟಿಗೆಂದು ಬಿಜೆಪಿ ನಾಯಕರು ಕುಮಾರಕೃಪಾ ಗೆಸ್ಟ್ ಹೌಸ್ ನ ನೆಲಮಹಡಿಯಲ್ಲಿ ಇದ್ದರೆ, ಮೊದಲ ಮಹಡಿಯಲ್ಲಿ ವೇಣುಗೋಪಾಲ್ ಭೇಟಿಗೆ ಕಾಂಗ್ರೆಸ್ ನಾಯಕರು ಕಾದು ನಿಂತಿದ್ದಾರೆ. ಇಬ್ಬರು ನಾಯಕರ ಭೇಟಿಗೆ ಆಗಮಿಸುತ್ತಿರುವ ಉಭಯ ಪಕ್ಷದ ನಾಯಕರು ರಾಜಕೀಯ ಮಾತುಕತೆಯಲ್ಲಿ ತೊಡಗಿದ್ದಾರೆ.

kumarakrupa 4

 

ವೇಣುಗೋಪಾಲ ಭೇಟಿಯಾಗಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿಎಲ್ ಶಂಕರ್ ಕೂಡ ಬಂದಿದ್ದರು. ಈ ವೇಳೆ ಬಿಜೆಪಿ ಮುಖಂಡ ಲೇಹರ್ ಸಿಂಗ್ ಹಾಗೂ ದಿನೇಶ್ ಗುಂಡೂರಾವ್ ಕೈ ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ರು.

kumarakrupa 10

kumarakrupa 8

kumarakrupa 3

kumarakrupa 2

kumarakrupa 5

kumarakrupa 7

Share This Article
Leave a Comment

Leave a Reply

Your email address will not be published. Required fields are marked *