ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ರಾಜಕೀಯ ಸುಗ್ಗಿ ಪ್ರಾರಂಭವಾಗಿದೆ. ಕಮಲ ಮನೆಯಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಚಾಣಕ್ಯ ಅಮಿತ್ ಷಾ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಇಂಧನ ಸಚಿವ ಡಿಕೆಶಿ ಮನೆ ಮೇಲಿನ ಐಟಿ ದಾಳಿ, ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಗೊಂದಲದ ಗದ್ದಲ, ಪ್ರತ್ಯೇಕ ಕನ್ನಡ ಧ್ವಜ ವಿಚಾರಗಳು ಬಿಸಿ ಆಗಿರುವಾಗಲೇ ಎರಡು ಪಕ್ಷಗಳ ರಾಷ್ಟ್ರೀಯ ನಾಯಕರ ಆಗಮನದ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
Advertisement
ರಾಯಚೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಬಿಜೆಪಿಗೆ ಟಾಂಗ್ ಕೊಡುವ ಸಾಧ್ಯತೆ ಇದೆ. ಇನ್ನೊಂದೆಡೆ ಅಮಿತ್ ಷಾ ಅವರು ಮೂರು ದಿನಗಳ ಬೆಂಗಳೂರು ಪ್ರವಾಸದಲ್ಲಿ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ. ಅಷ್ಟೇ ಅಲ್ಲ ಉತ್ತರ ಪ್ರದೇಶ ಮಾದರಿಯ ಸ್ಟ್ರಾಟಜಿಯನ್ನ ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.
Advertisement
ಈ ನಡುವೆ ಅಮಿತ್ ಷಾ ಅವರ ತಂತ್ರಗಾರಿಗೆ ಬಹಳ ದೊಡ್ಡದಿವೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ 10.45ಕ್ಕೆ ಬಂದಿಳಿಯುವ ಅಮಿತ್ ಷಾ, ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿಗೆ ಪಕ್ಷದ ಶಾಸಕರು,ಪದಾಧಿಕಾರಿಗಳ ಜತೆ ಸಭೆ ನಡೆಸುತ್ತಾರೆ. ನಾಳೆ ಸಂಜೆ ಖಾಸಗಿ ಹೋಟೆಲ್‍ನಲ್ಲಿ 600 ಜನ ಚಿಂತಕರ ಜತೆ ಷಾ ಸಭೆ ನಡೆಸಲಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
ಆ ಸಭೆಗೆ ರಿಯಲ್‍ಸ್ಟಾರ್ ಉಪ್ಪಿಗೂ ಆಹ್ವಾನ ಇರೋದು ಸಾಕಷ್ಟು ಕುತೂಹಲ ಮೂಡಿಸಿದ್ದು, ಉಪ್ಪಿ ಬಿಜೆಪಿ ಸೇರ್ತಾರಾ ಅನ್ನೋ ಕುತೂಹಲ ಗರಿಗೆದರಿದೆ. ಇನ್ನೊಂದೆಡೆ ಭಾನುವಾರ ಆದಿಚುಂಚನಗಿರಿ ಶ್ರೀಗಳ ಭೇಟಿ ಬಹಳ ಮಹತ್ವದಾಗಿದ್ದು, ಒಕ್ಕಲಿಗ ಸಮುದಾಯವನ್ನು ಸೆಳೆಯುವ ತಂತ್ರವೇನಾದ್ರೂ ಇದೆಯಾ ಅನ್ನೋದನ್ನು ಕಾದುನೋಡಬೇಕಿದೆ.
Advertisement
ಕೆಲವು ರಾಜಜಕೀಯ ತಂತ್ರಗಾರಿಕೆಗಳ ಜತೆಗೆ ಪಕ್ಷ ಸಂಘಟನೆಯ ಕೆಲ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲ ರಾಜ್ಯ ಬಿಜೆಪಿ, ಆರ್‍ಎಸ್‍ಎಸ್ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಡೇ ದಿನ ಗುಪ್ತ ಸಭೆ ನಡೆಸಲು ಫ್ಲ್ಯಾನ್ ನಡೆದಿದೆ ಎನ್ನಲಾಗಿದೆ.