ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜೈಲು ಸೇರಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಹಂತಕ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾನನ್ನು ಲಾಹೋರ್‌ನಲ್ಲಿ (Lahore) ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.
ಪಾಕಿಸ್ತಾನದ (Pakistan) ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಾಂಬಾ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇತ್ತ ಘಟನೆಯಿಂದ ಗಂಭೀರ ಗಾಯಗೊಂಡ ತಾಂಬಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಗ್ಗೆ ಡಿಸಿಪಿ ಪ್ರತಿಕ್ರಿಯೆ
Advertisement
Advertisement
ಆಪಾದಿತ ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಸರಬ್ಜಿತ್ ಸಿಂಗ್ (49) ಅವರನ್ನು ಪಾಕ್ ಕೋರ್ಟ್ 1991 ರಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಆದಾಗ್ಯೂ ಸರ್ಕಾರವು 2008 ರಲ್ಲಿ ಅನಿರ್ದಿಷ್ಟ ಅವಧಿಗೆ ಸಿಂಗ್ ಮರಣದಂಡನೆಯನ್ನು ತಡೆಹಿಡಿಯಿತು. ಬಳಿಕ ಏಪ್ರಿಲ್ 2013 ರಲ್ಲಿ ಲಾಹೋರ್ ಜೈಲಿನಲ್ಲಿ ಸಾವನ್ನಪ್ಪಿದ್ದರು. ಮರಣದ ನಂತರ ಸರಬ್ಜಿತ್ ಅವರ ಮೃತದೇಹವನ್ನು ಲಾಹೋರ್‌ನಿಂದ ಅಮೃತಸರಕ್ಕೆ ತರಲಾಯಿತು. ಅಲ್ಲಿ ಅವರ ಅಂತಿಮ ವಿಧಿಗಳನ್ನು ನಡೆಸಲಾಗಿತ್ತು.