ಕೀವ್: ಉಕ್ರೇನ್‍ನಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ಕೀವ್ ಸೇರಿದಂತೆ ಇತರ ನಗರಗಳ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತಕ್ಷಣವೇ ತಲುಪಿಸದಿದ್ದರೆ ಪರಿಸ್ಥಿತಿಯು ತುಂಬಾ ಅಪಾಯಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‍ಒ) ಎಚ್ಚರಿಸಿದೆ. ಡಬ್ಲ್ಯುಹೆಚ್‍ಒ ಪ್ರಕಾರ, ಉಕ್ರೇನ್‍ನಲ್ಲಿ 600 ಆಸ್ಪತ್ರೆಗಳಿವೆ. ಅಲ್ಲಿ 1,700 ಕೊರೊನಾ ರೋಗಿಗಳು ದಾಖಲಾಗಿದ್ದಾರೆ.
ಉಕ್ರೇನ್‍ನಲ್ಲಿ ಉಸಿರಾಟದ ಬಿಕ್ಕಟ್ಟು:
ಕೊರೊನಾ ರೋಗಿಗಳನ್ನು ಹೊರತುಪಡಿಸಿ ಉಕ್ರೇನ್‍ನಲ್ಲಿ ನವಜಾತ ಶಿಶುಗಳು, ಗರ್ಭಿಣಿಯರು ಮತ್ತು ವೃದ್ಧರಿಗೂ ಕಾಲಕಾಲಕ್ಕೆ ಆಮ್ಲಜನಕದ ಅಗತ್ಯವಿರಬಹುದು ಅಂತ ಡಬ್ಲ್ಯುಹೆಚ್‍ಒ ಉಲ್ಲೇಖಿಸಿದೆ. ಯುದ್ಧದ ಭರಾಟೆಯಲ್ಲಿ ಜನರ ಮನಸ್ಥಿತಿಯ ಮೇಲೂ ಪರಿಣಾಮ ಬೀರಿ ಪರಿಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ಇಂತಹ ವಿಷಮ ಪರಿಸ್ಥಿತಿಯಿಂದಾಗಿ ಅಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಆಕ್ಸಿಜನ್ ಜನರೇಟರ್ ಪ್ಲಾಂಟ್‍ನಿಂದ ಆಸ್ಪತ್ರೆಗೆ ಆಮ್ಲಜನಕ ಸಾಗಿಸುವಲ್ಲಿಯೂ ಲಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ
ವಿದ್ಯುತ್ ಬಿಕ್ಕಟ್ಟು ಕೂಡ ತೀವ್ರಗೊಂಡಿದೆ:
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ಗಂಟೆಗಳು ಕಳೆದಿವೆ. ನಿನ್ನೆ ಐದನೇ ದಿನದ ದಾಳಿ ನಡೆದಿದೆ. ಈ ಬಿಕ್ಕಟ್ಟಿನ ಮಧ್ಯೆ ಉಕ್ರೇನ್‍ನಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯ ಸೇವೆಗಳ ಮೇಲೆ ಗಂಭೀರ ಪರಿಣಾಮ ಕಾಣಿಸಿಕೊಂಡಿದೆ. ಅದೇ ರೀತಿ ಅಂಬುಲೆನ್ಸ್ ಮೂಲಕ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ ಅವರ ಮೇಲೆ ಗುಂಡು ಹಾರಿಸುವ ಅಪಾಯ ಕೂಡ ಹೆಚ್ಚಾಗಿದೆ.