ಬಾಲಿವುಡ್(Bollywood) ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಆರೋಗ್ಯ ಕೊಂಚ ಚೇತರಿಕೆ ಕಂಡಿದೆ. ನಟಿಯ ಆರೋಗ್ಯದ ವಿಚಾರದಲ್ಲಿ ಗುಡ್ ನ್ಯೂಸ್ ಸಿಗುತ್ತಿದ್ದಂತೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ರಣ್ವೀರ್ ಮತ್ತು ದೀಪಿಕಾ ಸಂಸಾರದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆಲ್ಲ ಕಾರಣವಾಗಿರುವುದು ಒಂದೇ ಒಂದು ಟ್ವೀಟ್.
ಪದ್ಮಾವತ್, ಬಾಜಿರಾವ್ ಮಸ್ತಾನಿ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಜೋಡಿ ರಣ್ವೀರ್ ಮತ್ತು ದೀಪಿಕಾ ನಿಜ ಜೀವನದಲ್ಲೂ ಬೆಸ್ಟ್ ಜೋಡಿ ಎನಿಸಿಕೊಂಡಿದ್ದಾರೆ. ಆದರ್ಶ ಜೋಡಿಗಳಲ್ಲಿ ಒಂದಾಗಿರುವ ದೀಪ್ವೀರ್ ಜೋಡಿ ವೈವಾಹಿಕ ಬದುಕಲ್ಲಿ ಏನು ಸರಿಯಿಲ್ಲ ಎಂಬ ವದಂತಿ ಹರಿದಾಡುತ್ತಿದೆ. ಇದಕ್ಕೆಲ್ಲ ಕಾರಣ ಉಮೈರ್ ಸಂಧು ಅವರ ಟ್ವೀಟ್, ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯ ಮತ್ತು ಸಿನಿಮಾ ವಿಮರ್ಶಕ ಉಮೈರ್ ಸಂಧು ಮಾಡಿರುವ ಟ್ವೀಟ್ ಸದ್ದು ಮಾಡುತ್ತಿದೆ. ರಣ್ವೀರ್ ಮತ್ತು ದೀಪಿಕಾ ನಡುವೆ ಎಲ್ಲವೂ ಸರಿಯಿಲ್ಲ ಎಂದು ಟ್ವೀಟ್ ಮಾಡಿರುವ ಈ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022
ಇತ್ತೀಚೆಗಷ್ಟೇ ನಡೆದ ಸಮಾರಂಭವೊಂದರಲ್ಲಿ ರಣ್ವೀರ್ ತಮ್ಮ ದಾಂಪತ್ಯದ ಬಗ್ಗೆ ಮಾತನಾಡಿದ್ದಾರೆ. 2012ರಲ್ಲಿ ಶುರುವಾದ ಡೇಟಿಂಗ್ 2022ಕ್ಕೆ 10 ವರ್ಷವಾಗಿದೆ. ನಾವು ಖುಷಿಯಿಂದ ಇದ್ದೇವೆ ಎಂದು ಹೇಳಿರುವ ವೀಡಿಯೋ ಕೂಡ ಸಖತ್ ವೈರಲ್ ಆಗುತ್ತಿದೆ. ಹಾಗಾದ್ರೆ ಯಾವ ಸುದ್ದಿ ನಿಜ ಎಂಬುದನ್ನ ಮುಂದಿನ ದಿನಗಳವೆರೆಗೂ ಕಾದುನೋಡಬೇಕಿದೆ.