ನವದೆಹಲಿ: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶಾನಲಯ (ED) ನೀಡಿದ ಸಮನ್ಸ್‌ಗೆ ಸತತ ಗೈರಾಗುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) 3 ದಿನ ಗುಜರಾತ್ ಪ್ರವಾಸ (Gujarat Tour) ಕೈಗೊಂಡಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ (Excise Policy Case) ಸಂಬಂಧಿಸಿದಂತೆ ಇಡಿ ಬಂಧಿಸುವ ಸಾಧ್ಯತೆಯ ಊಹಾಪೋಹಗಳ ನಡುವೆ ಕೇಜ್ರಿವಾಲ್ ಜ.6 ರಿಂದ 8ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದಾರೆ. ಕೇಜ್ರಿವಾಲ್ ಅವರ ಗುಜರಾತ್ ಭೇಟಿ ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಪ್ರವಾಸದ ಭಾಗವಾಗಿದೆ ಎಂದು ಎಎಪಿ ಮೂಲಗಳು ಗುರುವಾರ ತಿಳಿಸಿವೆ. ಇದನ್ನೂ ಓದಿ: ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ, ಕಡ್ಡಾಯ ರಜೆ ಮೇಲೆ ಹೋಗಿಲ್ಲ: ಪರಮೇಶ್ವರ್
Advertisement
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಡಿ ಅವರಿಗೆ ನೀಡಲಾದ ಮೂರನೇ ಸಮನ್ಸ್‌ಗೆ ಕೇಜ್ರಿವಾಲ್ ಗೈರಾದ ಒಂದು ದಿನದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
Advertisement
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಜ್ರಿವಾಲ್‌ಗೆ ಮೊದಲ ಇಡಿ ಸಮನ್ಸ್ ಜಾರಿ ಮಾಡಿ ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಡಿಸೆಂಬರ್ 18 ರಂದು ಎರಡನೇ ಸಮನ್ಸ್ ಕಳುಹಿಸಿ, ಡಿಸೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಜನವರಿ 3 ರಂದು ಮೂರನೇ ಸಮನ್ಸ್ ಜಾರಿ ಮಾಡಿತ್ತು.
Advertisement