ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಅವರ ಭಾಷಣವನ್ನು ಅಡ್ಡಿಪಡಿಸಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಡೆದ ಲೋಕಸಭಾ ಕಲಾಪದಲ್ಲಿ ಬಿಜೆಪಿಯ ಉತ್ತರ ಪ್ರದೇಶದ ಸಂಸದ ಸತ್ಯಪಾಲ್ ಸಿಂಗ್ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಲ ತುಂಬಲು ತಂದಿರುವ ಮಸೂದೆಯ ಬಗ್ಗೆ ಮಾತನಾಡುತ್ತಿರುವಾಗ, ಹೈದರಾಬಾದಿನ ಸಂಸದ ಒವೈಸಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸತ್ಯಪಾಲ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.
Advertisement
#WATCH: Union Home Minister Amit Shah says in Lok Sabha,"sunne ki bhi aadat daliye Owaisi Sahab, iss tarah se nahi chalega." Shah said this after AIMIM MP Asaduddin Owaisi objected to a part of BJP MP Satya Pal Singh's speech during discussion on NIA Amendment Bill. pic.twitter.com/QsbwsqYcKp
— ANI (@ANI) July 15, 2019
Advertisement
ಅಲ್ಲದೇ ಓವೈಸಿ, ಸತ್ಯಪಾಲ್ ಸಿಂಗ್ ಅವರು ಮಸೂದೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸದನದಕ್ಕೆ ಸಲ್ಲಿಸಿ ನಂತರ ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಕೋಪಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಲ್ಪ ಸತ್ಯಪಾಲ್ ಸಿಂಗ್ ಹೇಳುವುದನ್ನು ತಾಳ್ಮೆಯಿಂದ ಕೇಳಿ ಎಂದು ಹೇಳಿದರು.
Advertisement
Voting underway in Lok Sabha on National Investigative Agency (Amendment) Bill, 2019. pic.twitter.com/eQCF2gEnUi
— ANI (@ANI) July 15, 2019
Advertisement
ಅಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಸದಸ್ಯರ ಭಾಷಣದ ವೇಳೆ ಯಾವುದೇ ರೀತಿಯ ತೊಂದರೆ ನೀಡಲಿಲ್ಲ. ಆದ್ದರಿಂದ ಪ್ರತಿಪಕ್ಷದ ಸದಸ್ಯರು ಕೂಡ ಅದೇ ರೀತಿ ನಾವು ಮಾಡುವ ಭಾಷಣವನ್ನು ತಾಳ್ಮೆಯಿಂದ ಕೇಳಬೇಕು ಎಂದು ಹೇಳಿದರು. ಈ ಸಮಯದಲ್ಲಿ ಒವೈಸಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ಕೇಳಿಸಿಕೊಳ್ಳುವ ತಾಳ್ಮೆ ಕಲಿತುಕೊಳ್ಳಿ ಒವೈಸಿ ಸಾಬ್ ಎಂದು ಹೇಳಿದರು.
ಇದಕ್ಕೆ ಆಕ್ರೋಶಗೊಂಡು ಉತ್ತರಿಸಿದ ಒವೈಸಿ, ಅಮಿತ್ ಶಾ ಅವರು ನನಗೆ ಬೆರಳು ತೋರಿಸಬಾರದು. ಅಮಿತ್ ಶಾ ಅವರ ಮಾತಿಗೆ ನಾವು ಹೆದರಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಸತ್ಯಪಾಲ್ ಅವರ ಮಾತಿಗೆ ಅಡ್ಡಿ ಪಡಿಸುತ್ತಿಲ್ಲ ಬದಲಿಗೆ ಅವರನ್ನು ಸಾಕ್ಷಿ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.
https://twitter.com/ShobhaBJP/status/1150747222062952448
ಇದಕ್ಕೆ ಉತ್ತರಿಸಿದ ಅಮಿತ್ ಶಾ ಅವರು ನಾವು ಯಾರನ್ನು ಹೆದರಿಸುವ ಕೆಲಸ ಇಲ್ಲಿ ಮಾಡುತ್ತಿಲ್ಲ. ನಮ್ಮ ಸದಸ್ಯರು ಹೇಳುವ ಮಾತುಗಳನ್ನು ಕೇಳುವ ತಾಳ್ಮೆ ಇರಬೇಕು ಎಂದು ಹೇಳುತ್ತಿದ್ದೇವೆ. ನಿಮ್ಮ ಮನಸ್ಸಿನಲ್ಲಿ ಭಯ ಇದ್ದಾಗ ನಾವು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ತಿರುಗೇಟು ನೀಡಿದರು.
ಮಸೂದೆಯಲ್ಲಿ ಏನಿದೆ?
ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕ ಪ್ರಕರಣಗಳ ತನಿಖೆಗಾಗಿ ಎನ್‍ಐಎಗೆ ಹೆಚ್ಚಿನ ಶಕ್ತಿ ನೀಡುವ ನಿಟ್ಟಿನಲ್ಲಿ ಇಂದು ಲೋಕಸಭೆ ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ಪಾಸ್ ಮಾಡಿದೆ. ಮಸೂದೆಯ ಪರ 278 ಮಂದಿ ಮತ ಹಾಕಿದರೆ 6 ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
Home Minister Amit Shah in Lok Sabha, today: Repealing POTA (Prevention of Terrorism Act) wasn't a right step, number of terrorists incidents increased so much between 2004-2008 that the then UPA govt had to bring in NIA. It was after Mumbai attack that it was decided to form NIA pic.twitter.com/EGtpH7v4Uw
— ANI (@ANI) July 15, 2019
ಈ ಮಸೂದೆ ರಾಜ್ಯಸಭೆಯಲ್ಲೂ ಪಾಸಾಗಿ ಕಾಯ್ದೆಯಾಗಿ ಬಂದರೆ ಭದ್ರತೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇವಲ ಭಾರತ ಮಾತ್ರವಲ್ಲದೇ ಹೊರದೇಶಕ್ಕೂ ಹೋಗಿ ತನಿಖೆ ಮಾಡುಬಹುದಾಗಿದೆ. ಈ ತಿದ್ದುಪಡಿಯ ಪ್ರಕಾರ ಎನ್‍ಐಎ ತನಿಖಾ ಸಂಸ್ಥೆ ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಣಿಕೆ ಪ್ರಕರಣಗಳನ್ನು ಹೊರದೇಶಗಳಿಗೂ ಹೋಗಿ ಭೇದಿಸುವ ಶಕ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಅಪರಾಧ ಮಾಡಿ ಆರೋಪಿ ವಿದೇಶಕ್ಕೆ ಪಲಾಯನ ಮಾಡಿದರೆ ಎನ್‍ಐಎಗೆ ವಿದೇಶಕ್ಕೆ ಹೋಗಿ ತನಿಖೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಮಸೂದೆಯಿಂದ ಎನ್‍ಐಎಗೆ ಹೊಸ ಶಕ್ತಿ ಬಂದಂತೆ ಆಗಿದೆ.
ವಿದೇಶಗಳಲ್ಲಿನ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳ ಮೇಲಿನ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡುವ ಅಂಶ ಈ ಮಸೂದೆಯಲ್ಲಿದೆ.
2009 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಈ ಪ್ರಕರಣ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ ಎನ್‍ಐಎಯನ್ನು ಆರಂಭಿಸಿತ್ತು.