ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

Public TV
1 Min Read
rhea chakraborty 2

ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ಮೊದಲ ಬಾರಿಗೆ ಮದುವೆ ಲೈಫ್ (Wedding Life) ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಮಾಡಲು ಕೋರ್ಟ್ ಅನುಮತಿ ಬೇಕಿಲ್ಲ ಎಂದು ರಿಯಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಓಪನ್ ಆಗಿ ಮದುವೆ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

rhea chakraborty 3

Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ರಿಯಾ ಲವ್, ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ವಯಸ್ಸಿಗೆ ಮದುವೆ ಆಗಬೇಕು ಅಂತ ಹೇಳಲು ಆಗಲ್ಲ. ಮದುವೆಗೆ ಒಬ್ಬೊಬ್ಬರಿಗೆ ಒಂದೊಂದು ವಯಸ್ಸು ಸೂಕ್ತ ಎನಿಸಿಸುತ್ತದೆ. ಮದುವೆ ವಿಷಯದಲ್ಲಿ ಹೆಣ್ಣು ಏನು ಎದುರಿಸುತ್ತಾಳೋ ಅದನ್ನು ಪುರುಷ ಎದುರಿಸಲಾರ. ಮದುವೆ ಎಂದಾಗ ಒಂದಷ್ಟು ಒತ್ತಡ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಬ್ಯಾಚುಲರ್ ಪಾರ್ಟಿ ಸಂಭ್ರಮದಲ್ಲಿ ‘ಪೆಟ್ಟಾ’ ನಟಿ ಮೇಘಾ ಆಕಾಶ್

rhea 1

ಎಲ್ಲ ವಯಸ್ಸಿನಲ್ಲಿಯೂ ಮಗು ಮಾಡಿಕೊಳ್ಳಲಾಗೋದಿಲ್ಲ. ಮಗು ಮಾಡಿಕೊಳ್ಳಲು ಅಂಡಾಣು ಸಂಗ್ರಹ ಕೂಡ ಆಯ್ಕೆ ಮಾಡಿಕೊಳ್ಳಬಹುದು. ನನ್ನ ಅನೇಕ ಸ್ನೇಹಿತರು 20 ಮತ್ತು 30ನೇ ವಯಸ್ಸಿಗೆ ಮದುವೆಯಾಗಿದ್ದಾರೆ. ಅವರು 40ನೇ ವಯಸ್ಸಿಗೆ ಮಗು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು 20ನೇ ವಯಸ್ಸಿಗೆ ಮಕ್ಕಳನ್ನು ಮಾಡಿಕೊಂಡಿದ್ದಾರೆ. ಆದರೆ ತಡವಾಗಿ ಮದುವೆ ಆಗುತ್ತಿರೋದು ಹೆಚ್ಚಾಗ್ತಿದೆ ಎಂದು ರಿಯಾ ಹೇಳಿದ್ದಾರೆ.

32ನೇ ವಯಸ್ಸಿನಲ್ಲಿರುವ ನಾನು 40ನೇ ವಯಸ್ಸಿಗೆ ಮದುವೆ ಆಗೋದಕ್ಕೆ ಬಯಸುವೆ. ನಾನು ಇನ್ನೂ ಮದುವೆ ಆಗೋಕೆ ರೆಡಿ ಇಲ್ಲ. ನನಗೆ ವೃತ್ತಿ ಜೀವನದ ಕಡೆಗೆ ಗಮನ ಕೊಡಬೇಕಿದೆ. ಮದುವೆ ವಿಚಾರದಲ್ಲಿ ಕಾನೂನು ಮಧ್ಯೆ ಬರೋದು ನನಗೆ ಇಷ್ಟ ಇಲ್ಲ. ನಾನು ಪಾಸ್‌ಪೋರ್ಟ್ ಪಡೆದುಕೊಳ್ಳಲು ಕೋರ್ಟ್‌ಗೆ ಹೋಗುತ್ತೇನೆ. ಆದರೆ ಒಬ್ಬರನ್ನು ಪ್ರೀತಿ ಮಾಡಲು ಅನುಮತಿ ಕೊಡಿ ಅಂತ ಕೋರ್ಟ್ ಬಳಿ ಕೇಳೋದಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.

Share This Article