ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನಕ್ಕೆ ಕ್ಷಣನೆ ಬಾಕಿಯಿರುವಾಗಲೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಒಂದೇ ದಿನ ಎರಡು ಕಡೆ ಉಗ್ರರು ನಾಗರಿಕರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ.
#BREAKING: Terrorists have attacked a lady Farha of Jaipur, Rajasthan and her spouse Tabrez at Yannar of Anantnag in South Kashmir. Injured evacuated to hospital for treatment. Area has been cordoned off. More details are awaited. pic.twitter.com/FDbQWT5k7B
— Aditya Raj Kaul (@AdityaRajKaul) May 18, 2024
Advertisement
ಇಲ್ಲಿನ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಸರ್ಪಂಚ್ (Ex Sarpanch) ಒಬ್ಬರು ಹತರಾದರೆ, ಅನಂತನಾಗ್ ಜಿಲ್ಲೆಯಲ್ಲಿ ರಾಜಸ್ಥಾನದ ದಂಪತಿಯು ಗಾಯಗೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು (J & K Police) ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಹೆಚ್ಚಾಗಿದ್ದು, ಕಳೆದ ಏಪ್ರಿಲ್‌ನಲ್ಲೂ ಶೋಪಿಯಾನ್ ಜಿಲ್ಲೆಯಲ್ಲಿ ಟೂರಿಸ್ಟ್ ಗೈಡ್ ಒಬ್ಬನನ್ನ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಜೀನ್ಸ್ ಪ್ಯಾಂಟ್, ಟೀಶರ್ಟ್‍ನಲ್ಲಿಟ್ಟು ಸಾಗಿಸುತ್ತಿದ್ದ 1.96 ಕೋಟಿ ಮೌಲ್ಯದ ಚಿನ್ನ ಸೀಜ್
Advertisement
ಶೋಪಿಯಾನ್ ಜಿಲ್ಲೆಯ ಹುರ್ಪುರ ಗ್ರಾಮದಲ್ಲಿ ಉಗ್ರರ ದಾಳಿಯಲ್ಲಿ (Terrorist Attacks) ಮಾಜಿ ಸರ್ಪಂಚ್ ಐಜಾಜ್ ಅಹ್ಮದ್ ಶೇಖ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ದೇಹ ಸ್ಪಂಧಿಸದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 10ಕ್ಕೂ ಹೆಚ್ಚು ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ದಾಳಿ – ಸೋಮವಾರದ ಒಳಗೆ ಬಂದ್‌ಗೆ ಸೂಚನೆ!
Advertisement
ದಂಪತಿಗೆ ಗಾಯ:
ಅನಂತನಾಗ್‌ನಲ್ಲಿಯೂ ಉಗ್ರರ ದಾಳಿ ನಡೆದಿದ್ದು, ರಾಜಸ್ಥಾನ ಮೂಲದ ಪತಿ-ಪತ್ನಿ (Tourist Couple) ಗಾಯಗೊಂಡಿದ್ದಾರೆ. ಟೂರಿಸ್ಟ್ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪರ್ಹಾ ಹಾಗೂ ಅವರ ಪತಿ ತಬ್ರೇಜ್ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಡೆ ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೇ 20ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರಕ್ಕೆ (Lok Sabha Constituency) ಮತದಾನ ನಡೆಯಲಿದೆ.