ಬೆಂಗಳೂರು: ಬಿಜೆಪಿ (BJP) ಆಂತರಿಕ ಕಿತ್ತಾಟ ಜೋರಾಗುತ್ತಿದಂತೆ ಶಮನ ಮಾಡಲು ಹೈಕಮಾಂಡ್ (High Command) ಈಗ ಎಂಟ್ರಿಯಾಗುತ್ತಿದೆ.
ಮಂಗಳವಾರ ನಾಳೆ ರಾಜ್ಯಕ್ಕೆ ಅಗಮಿಸಲಿರುವ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ ವಾಲ್ (Radha Mohan Das Agarwal) ಮೂರು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿಗೆ ರಿಲೀಫ್
ಆರಂಭದಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಸಕರು, ಸಂಸದರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಸಂಘಟನೆ ಪರ್ವದ ಪರಿಶೀಲನೆ ನಡೆಯಲಿದೆ. ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ.
ಸಂಜೆ 7 ಗಂಟೆ ಕೋರ್ ಕಮಿಟಿ ಸಭೆ ನಡೆಯಲಿದ್ದು ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯವಾಗಿ ಯತ್ನಾಳ್, ವಿಜಯೇಂದ್ರ ಬಣದ ಹೇಳಿಕೆಗಳ ಬಗ್ಗೆ ಗಂಭೀರ ಚರ್ಚೆಯಾಗುವ ಸಾಧ್ಯತೆಯಿದೆ.