– ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ನಯಾ ಟಾರ್ಗೆಟ್
– ಕರ್ನಾಟಕದಲ್ಲಿ 20 ಸೇಟ್ ಗೆಲ್ಲಲು ರಣತಂತ್ರ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election) ಕಾರ್ಯತಂತ್ರ ರೂಪಿಸುವ ಕುರಿತು ರಾಜ್ಯ ಕಾಂಗ್ರೆಸ್ (Congress) ನಾಯಕರೊಂದಿಗೆ ದೆಹಲಿಯಲ್ಲಿ (New Delhi) ಹೈಕಮಾಂಡ್ ಬುಧವಾರ ಹೈವೋಲ್ಟೇಜ್ ಸಭೆ ಆಯೋಜಿಸಿದೆ.
Advertisement
ರಾಜ್ಯ ನಾಯಕರೊಂದಿಗೆ ಪಕ್ಷದ ವರಿಷ್ಠರು ಸಭೆ ನಡೆಸಲಿದ್ದಾರೆ. 2 ಹಂತದಲ್ಲಿ ಸಭೆ ಇದ್ದು, ಮಧ್ಯಾಹ್ನ 3:30ಕ್ಕೆ ಮೊದಲ ಸಭೆ ನಡೆಯಲಿದೆ. ಮೊದಲ ಸಭೆಯಲ್ಲಿ ಹಿರಿಯ ನಾಯಕರು, ಕೆಲ ಸಚಿವರು ಭಾಗಿಯಾಗಲಿದ್ದಾರೆ. ಮೊದಲ ಸಭೆಯಲ್ಲಿ 38 ನಾಯಕರು ಭಾಗಿಯಾಗುವ ನಿರೀಕ್ಷೆ ಇದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೆಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್
Advertisement
Advertisement
ನಂತರ ಸಂಜೆ 4:30ಕ್ಕೆ ಕಾಂಗ್ರೆಸ್ ನಾಯಕರ ಎರಡನೇ ಸಭೆ ಇದ್ದು, ಎಲ್ಲಾ 34 ಸಚಿವರ ಜತೆ ಸಭೆ ನಡೆಯಲಿದೆ. ಹೊಸ ಪ್ರಯತ್ನದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಲೋಕಸಭೆಯಲ್ಲಿ 100ರ ಗಡಿ ದಾಟುವ ಲೆಕ್ಕಾಚಾರವಿದೆ. ಈ ಹಿನ್ನಲೆ ರಾಜ್ಯವಾರು ಕಾಂಗ್ರೆಸ್ ನಾಯಕರ ಸಭೆ ಆಯೋಜಿಸುತ್ತಿದೆ. ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿರುವ ರಾಜ್ಯಗಳ ನಾಯಕರೊಂದಿಗೆ ಚರ್ಚೆ ನಡೆಸಲಿದೆ.
Advertisement
ಕಾಂಗ್ರೆಸ್ ಸಭೆಗೆ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಜಿ.ಪರಮೇಶ್ವರ್, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಂಸದ ಡಿ.ಕೆ.ಸುರೇಶ್, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಜಗದೀಶ್ ಶೆಟ್ಟರ್, ಶಾಸಕ ಲಕ್ಷ್ಮಣ ಸವದಿ ಅವರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾಘಂಟಿ ವಿರುದ್ಧ FIR
ಲೋಕಸಭೆ ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಲಾಗಿದೆ. ರಾಜ್ಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸುವ ಪ್ರಯತ್ನವನ್ನ ಹೈಕಮಾಂಡ್ ಮಾಡಿದೆ. ಇತ್ತೀಚೆಗೆ ಕೆಲ ಶಾಸಕರು ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ನಾಯಕರು ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ದೂರುಗಳು, ಅಸಮಾಧಾನ ಕಾರಣಗಳ ಮಾಹಿತಿ ಪಡೆಯಲಿದ್ದಾರೆ. ಸಚಿವರೊಂದಿಗಿನ ಎರಡನೇ ಸಭೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಿದ್ದಾರೆ. ಇದೇ ವೇಳೆ ಸಚಿವರಿಗೆ ಹೊಸ ಹೊಸ ಟಾಸ್ಕ್ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಮತ್ತು ಶಾಸಕರ ನಡುವೆ ಅಂತರ ಹೆಚ್ಚಿದ ಆರೋಪ ಕೇಳಿಬಂದಿದ್ದು, ಶಾಸಕರ ಅಸಮಾಧಾನ ಶಮನಕ್ಕೆ ಸಮನ್ವಯ ಸಮಿತಿ ರಚಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ಶಾಸಕರು ಸಮಿತಿ ರಚನೆ ಬಗ್ಗೆ ಪರಸ್ಪರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಹಿರಿಯ ನಾಯಕರ ಸಭೆಯಲ್ಲಿ ಸಮನ್ವಯ ಸಮಿತಿ ರಚನೆಗೆ ಒತ್ತಡ ಹೇರುವ ಸಾಧ್ಯತೆ ಇದೆ.
ಸಭೆಯಲ್ಲಿ ಲೋಕಸಭೆ ಫೈಟ್‌ಗೆ ಜವಾಬ್ದಾರಿ ಹಂಚಿಕೆ ಫಿಕ್ಸ್ ಆಗುವಂತಿದೆ. ಕಾಂಗ್ರೆಸ್ ವರಿಷ್ಠರ ಮುಂದೆ 5 ಟಾಸ್ಕ್ಗಳಿವೆ ಎನ್ನಲಾಗಿದೆ. ಲೋಕಸಭೆಗೆ ಪಕ್ಷ ಸಂಘಟನೆ, ಅಭ್ಯರ್ಥಿಗಳ ಸುಸೂತ್ರವಾಗಿ ಮಾಡಿ ಕನಿಷ್ಠ 15-20 ಸ್ಥಾನ ಗೆಲ್ಲಲು ನಾಯಕರನ್ನ ಸಿದ್ಧಪಡಿಸುವುದು. ಚುನಾವಣೆ ಸಮಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ 40% ಅಕ್ರಮದ ತನಿಖೆಗೆ ಗ್ರೀನ್ ಸಿಗ್ನಲ್ ಕೊಡೋದು. ಯಾವ ಸ್ವರೂಪದ ತನಿಖೆ ಅಂತ ತೀರ್ಮಾನ ಮಾಡೋದು. ನಿಗಮ-ಮಂಡಳಿಗಳ ನೇಮಕದ ಗೊಂದಲಕ್ಕೆ ಫುಲ್ ಸ್ಟಾಪ್ ಹಾಕುವುದು. 50:50 ಸೂತ್ರದಡಿ ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ. ಸರ್ಕಾರದ ವಿರುದ್ಧ ಕೆಲ ಶಾಸಕರ ಬಹಿರಂಗ ಅಸಮಾಧಾನ ಸರಿ ಮಾಡುವುದು. ಲೋಕಸಭೆ ಚುನಾವಣೆಗೆ ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿ ಹೊಂದಾಣಿಕೆ ಸೂತ್ರ ಕೊಡೋದು. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಕೊರತೆ ಕಾಣ್ತಿದೆ. ಇದನ್ನ ಶಮನ ಮಾಡೋಕೆ ಸಮನ್ವಯ ಸಮಿತಿ ರಚನೆ ಮಾಡಿ ಗೊಂದಲ ನಿವಾರಣೆ ಮಾಡುವುದು ಹೈಕಮಾಂಡ್ ಮುಂದಿರೋ 5 ಟಾಸ್ಕ್ ಎನ್ನಲಾಗಿದೆ.
Web Stories