ಸಿಯೋಲ್: ಉತ್ತರ ಕೊರಿಯಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೇ ಇನ್ನೊಂದು ಸಾಂಕ್ರಾಮಿಕ ರೋಗವೊಂದು ಸ್ಫೋಟಿಸಿರುವುದಾಗಿ ಗುರುವಾರ ವರದಿಯಾಗಿದೆ. ಈ ಹೊಸ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತಮ್ಮ ಖಾಸಗಿ ಔಷಧಿಗಳನ್ನು ದಾನಮಾಡಿದ್ದಾರೆ ಎನ್ನಲಾಗಿದೆ.
ಹೊಸ ರೋಗ ಎಷ್ಟು ಗಂಭೀರವಾಗಿದೆ ಎಂಬುದು ಅಸ್ಪಷ್ಟವಾಗಿದೆ. ಆದರೆ ಹೊರಗಿನವರು ಹೇಳುವ ಪ್ರಕಾರ ಕಿಮ್ ಜಾಂಗ್ ಉನ್ ನಾಯಕನಾಗಿ ತನ್ನ ಮೇಲಿರುವ ಕಳಂಕವನ್ನು ನಿವಾರಿಸಲು ಸಾರ್ವಜನಿಕರ ಕಾಳಜಿ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ?
Advertisement
Advertisement
ಹೊಸ ರೋಗ ಖಚಿತಪಡಿಸಿಕೊಂಡವರಿಗೆ ಕಿಮ್ ಬುಧವಾರ ತನ್ನ ಕುಟುಂಬದವರಿಗೆ ಮೀಸಲುಪಡಿಸಿದ್ದ ಔಷಧಿಗಳನ್ನು ನೀಡಿದ್ದಾರೆ ಎಂದು ಅಧಿಕೃತ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಕಿಮ್ ಹಾಗೂ ಅವರ ಪತ್ನಿ ರಿ ಸೋಲ್ ಜು ದಾನಮಾಡುವ ಔಷಧಿಗಳನ್ನು ಪರಿಶೀಲಿಸುತ್ತಿದ್ದ ಫೋಟೋವನ್ನು ರೋಡಾಂಗ್ ಸಿನ್ಮುನ್ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದೆ. ಇದನ್ನೂ ಓದಿ: ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಕ್ಯಾಶ್! – ಸುದ್ದಿ ಕೇಳುತ್ತಲೇ ಮುಗಿಬಿದ್ರು ಜನ
Advertisement
ಉತ್ತರ ಕೊರಿಯಾದಲ್ಲಿ ಯಾವ ರೋಗ ಹರಡುತ್ತಿದೆ ಹಾಗೂ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕೆಲವು ವೀಕ್ಷಕರ ಪ್ರಕಾರ ಟೈಫಾಯಿಡ್, ಭೇದಿ ಅಥವಾ ಕಾಲಾರಾದಂತಹ ರೋಗ ಇರಬಹುದು ಎನ್ನಲಾಗಿದೆ.