ತೈಪೆ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ಬಳಿಕ ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ ಆಘಾತಕಾರಿ ಘಟನೆ ನಡೆದಿದೆ. ತೈವಾನ್‌ನ ಉನ್ನತ ರಕ್ಷಣಾ ಅಧಿಕಾರಿಯೊಬ್ಬರ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ತೈವಾನ್‌ನ ಕ್ಷಿಪಣಿ ಅಭಿವೃದ್ಧಿ ತಂಡದ ನೇತೃತ್ವ ವಹಿಸಿದ್ದ ತೈವಾನ್‌ನ ಉನ್ನತ ಅಧಿಕಾರಿ ಔ ಯಾಂಗ್ ಲಿ-ಹಸಿಂಗ್ ಶನಿವಾರ ಹೋಟೆಲ್ ರೂಮ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ
Advertisement
Advertisement
ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಕಿಡಿಕಾರಿದ್ದ ಚೀನಾ ತೈವಾನ್ ಸುತ್ತ ತನ್ನ ಮಿಲಿಟರಿ ಅಭ್ಯಾಸಗಳನ್ನು ನಡೆಸಿತ್ತು. ಇಂದು ಬೆಳಗ್ಗೆಯಷ್ಟೇ ಚೀನಾ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಇದನ್ನೂ ಓದಿ: ಕಷ್ಟದ ದಿನಗಳು ಹತ್ತಿರದಲ್ಲೇ ಇದೆ: ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ