ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು, ವಿಶ್ವದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಮನೆಯನ್ನು ಕಳೆದುಕೊಂಡು ಇರಲು ಜಾಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಬಂಕರ್‌ನಲ್ಲಿ ಮಗುವಿಗೆ ಜನ್ಮವನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
23 ವರ್ಷದ ಅಮೀದ್ ಚವ್ಸ್ ರಷ್ಯಾ ದಾಳಿಗೆ ಹೆದರಿ ಮೆಟ್ರೋ ಸ್ಟೇಶನ್ ಸಿಟಿ ಬಳಿ ಇರುವ ಬಂಕರ್‌ನಲ್ಲಿ ಅಡಗಿ ಕುಳಿತಿದ್ದರು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಕಿರುಚಾಟವನ್ನು ಕೇಳಿ ಉಕ್ರೇನ್ ಪೊಲೀಸರು ಸಹಾಯ ಬಂದಿದ್ದಾರೆ. ಆಗ ವೈದ್ಯರು ಬಂಕರ್‌ನಲ್ಲಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
A brave woman gave birth to a baby named Mia, in Kiev Underground! https://t.co/1fm4ZShTsP
— ????☕????❤ Raphi, Stands With Ukraine ???????????? (@Raphael_F666) February 26, 2022
Advertisement
ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ರಷ್ಯಾ ಸೇನೆ ಮತ್ತು ಕ್ಷಿಪಣಿಗಳು ಉಕ್ರೇನ್ ಮೇಲೆ ದಾಳಿ ನಡೆಸಿತು. ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಯೂರೋಪ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಉಕ್ರೇನ್ ಮೇಲೆ ಸತತ ಮೂರನೇ ದಿನವೂ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‍ನಲ್ಲಿ ಈವರೆಗೆ 198 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ರಷ್ಯಾ ಸೇನಾ ಪಡೆ ಉಕ್ರೇನ್ ರಾಜಧಾನಿ ಕೀವ್ ಪ್ರವೇಶಿಸಿದ್ದು, ಬೃಹತ್ ಕಟ್ಟಡಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್ ಹಿಡಿದ ದಂಪತಿ
Advertisement
Two hours ago, a woman gave birth in the #Kyiv subway. This news is what gives us hope! pic.twitter.com/tnxCSnaERO
— Verkhovna Rada of Ukraine (@ua_parliament) February 25, 2022
ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿ ಕೇಂದ್ರಕ್ಕೆ ರಾಗಾ ಮನವಿ
ಕೀವ್ ತೊರೆಯುವಂತೆ ಅಮೆರಿಕ ಝೆಲೆಸ್ಕಿಗೆ ಸಲಹೆ ನೀಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ಧಿಕ್ಕರಿಸಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ