ನಟ ಆಮೀರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ, ಜೂ.20ರಂದು ಬಿಡುಗಡೆ ಆಗಲಿದೆ. ಬಿಡುಗಡೆಯ ಹೊತ್ತಲ್ಲೇ ಈ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಒತ್ತಾಯ ಮಾಡುತ್ತಿದ್ದಾರೆ. ಇದೀಗ ಬಾಯ್ಕಾಟ್‌ನಿಂದ ತಪ್ಪಿಸಿಕೊಳ್ಳಲು ಆಮಿರ್ ಖಾನ್ ಹೊಸ ಪ್ಲ್ಯಾನ್ ಮಾಡಿದ್ದು, ತಮ್ಮ ನಿರ್ಮಾಣ ಸಂಸ್ಥೆಯ ಎಕ್ಸ್ ಖಾತೆಯ ಡಿಪಿಗೆ ತ್ರಿವರ್ಣ ಧ್ವಜ ಹಾಕಿಕೊಂಡಿದ್ದಾರೆ.
ಬಾಯ್ಕಾಟ್‌ಗೆ ಕಾರಣವೇನು?
ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನತೆ ಸಮಯದಲ್ಲಿ, ಪಾಕ್‌ಗೆ ಟರ್ಕಿ ಬೆಂಬಲ ನೀಡಿತ್ತು. ಇದೇ ವೇಳೆ, 2020ರಲ್ಲಿ ಆಮೀರ್ ಖಾನ್ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ದಂಪತಿಯನ್ನು ಭೇಟಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿ ಟರ್ಕಿ ನಂಟು ಹೊಂದಿರುವ ಆಮಿರ್ ಖಾನ್ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!
&
Remember when Aamir Khan had gone to Turkey & Met the Turkish First Lady?? So Now you know what has to be done with his latest movie Sitare Zameen Par#SitareZameenPartrailer #BoycottTurkey #BoycottSitaareZameenPar pic.twitter.com/qcnLWyaaAk
— Rosy (@rose_k01) May 13, 2025
nbsp;
ʻಸಿತಾರೆ ಜಮೀನ್ ಪರ್’ ಚಿತ್ರದ ಮೂಲಕ 3 ವರ್ಷಗಳ ಬಳಿಕ ಆಮೀರ್ ಖಾನ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹೀಗಿರುವಾಗ ಬಾಯ್‌ಕಾಟ್ ಸಿತಾರೆ ಜಮೀನ್ ಪರ್’ ಎಂದು ಎಕ್ಸ್ ಖಾತೆಯಲ್ಲಿ ಟ್ರೆಂಡಿಂಗ್ ಆಗ್ತಿರೋದು ಚಿತ್ರತಂಡಕ್ಕೆ ತಲೆನೋವಾಗಿದೆ.
ಇತ್ತ, ಶಸ್ತ್ರಾಸ್ತ್ರಗಳನ್ನು ಪಾಕ್‌ಗೆ ಒದಗಿಸಿದ ಟರ್ಕಿಗೆ ಒಂದೊಂದೇ ವ್ಯವಹಾರಗಳಿಗೆ ಬ್ರೇಕ್ ಹಾಕುತ್ತಾ ಭಾರತ ತಕ್ಕ ಪಾಠ ಕಲಿಸುತ್ತಿದೆ. ಇದರ ನಡುವೆ ಟರ್ಕಿ ಅಧ್ಯಕ್ಷ ಉತ್ತಮ ಒಡನಾಟ ಹೊಂದಿರುವ ಆಮೀರ್ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾರಿದ್ದಾರೆ. ಟರ್ಕಿ ಫ್ಯಾನ್ಸ್‌ಗೆ ಬೇಸರ ಮೂಡಿಸದಿರಲು ಆಮೀರ್‌ಗೆ ಇಷ್ಟವಿಲ್ಲ. ಹೀಗಾಗಿ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ಬಗ್ಗೆ ತಡವಾಗಿ ಅಭಿನಂದನೆ ಸಲ್ಲಿಸಿದರು ಎಂದೆಲ್ಲಾ ನಟನ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: Ramayana: ‘ರಾವಣ’ ಯಶ್ ಪತ್ನಿಯಾಗಿ ಕಾಜಲ್ ಅಗರ್ವಾಲ್?