ನವದೆಹಲಿ: ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸೋಮವಾರ ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಅಗ್ನಿವೀರ್ ಯೋಜನೆಯನ್ನು ಕೇಂದ್ರವು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಅಗ್ನಿಪಥ್ ಸುತ್ತಲಿನ ಹಿಂಸಾಚಾರದಿಂದ ನಾನು ದುಃಖಿತನಾಗಿದ್ದೇನೆ ಎಂದು ಹೇಳಿದ ಅವರು, ನಾಲ್ಕು ವರ್ಷಗಳಲ್ಲಿ ಅಗ್ನಿವೀರರು ಗಳಿಸುವ ಕೌಶಲ್ಯ ಮತ್ತು ಶಿಸ್ತು ಅವರನ್ನು ಉದ್ಯೋಗಿಗಳನ್ನಾಗಿ ಮಾಡುತ್ತದೆ. ಮಹೀಂದ್ರಾ ಗ್ರೂಪ್ ಅಂತಹ ತರಬೇತಿ ಪಡೆದ ಮತ್ತು ಸಮರ್ಥ ಜನರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸ್ವಾಗತಿಸುತ್ತದೆ ಎಂದು ದೊಡ್ಡ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ವಿರೋಧಿಸಿ ಇಂದು ಭಾರತ್ ಬಂದ್ – ಹೋರಾಟಗಾರರಿಗೆ ಶಾಕ್, 35 ವಾಟ್ಸಪ್ ಗ್ರೂಪ್ ನಿಷೇಧ
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಅಗ್ನಿಪಥ್ ಯೋಜನೆಯ ಸುತ್ತ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ. ಅದನ್ನು ನಾನು ಮತ್ತೆ ಹೇಳಲು ಬಯಸುತ್ತೇನೆ. ಅಗ್ನಿವೀರರು ಗಳಿಸಿರುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮ ಉದ್ಯೋಗ ಪಡೆಯಲು ಸಹಾಯ ಮಾಡುತ್ತೆ. ಅಂತಹ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ಬರೆದು ಉದ್ಯೋಗದ ಆಫರ್ ಕೊಟ್ಟಿದ್ದಾರೆ.
Advertisement
Saddened by the violence around the #Agneepath program. When the scheme was mooted last year I stated-& I repeat-the discipline & skills Agniveers gain will make them eminently employable. The Mahindra Group welcomes the opportunity to recruit such trained, capable young people
— anand mahindra (@anandmahindra) June 20, 2022
Advertisement
ಈ ಟ್ವೀಟ್ ಮಾಡಿದ ಒಂದು ನಿಮಿಷದಲ್ಲಿ, ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಅದಕ್ಕೆ ಉತ್ತರಿಸಿದ್ದು, ಅಗ್ನಿವೀರ್ಸ್‍ಗೆ ಮಹೀಂದ್ರಾ ಗ್ರೂಪ್ ಯಾವ ರೀತಿಯ ಪೋಸ್ಟ್‌ಗಳನ್ನು ನೀಡುತ್ತದೆ? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ, ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಹೆಚ್ಚಿನ ಉದ್ಯೋಗಾವಕಾಶವಿದೆ.
ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಉದ್ಯೋಗಕ್ಕೆ ದೊಡ್ಡ ಸಾಮರ್ಥ್ಯವಿದೆ. ನಾಯಕತ್ವ, ಟೀಮ್‍ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ ಅಗ್ನಿವೀರರು ಉದ್ಯಮಕ್ಕೆ ಬೇಕಾದ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ. ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಯವರೆಗಿನ ಸಂಪೂರ್ಣ ಶಕ್ತಿಯನ್ನು ಅವರು ಹೊಂದಿದ್ದಾರೆ ಎಂದು ಉತ್ತರ ಕೊಟ್ಟಿದ್ದಾರೆ.
Large potential for employment of Agniveers in the Corporate Sector. With leadership, teamwork & physical training, agniveers provide market-ready professional solutions to industry, covering the full spectrum from operations to administration & supply chain management https://t.co/iE5DtMAQvY
— anand mahindra (@anandmahindra) June 20, 2022
ಅಗ್ನಿಪಥ್‍ಗೆ ಯಾಕಿಷ್ಟು ವಿರೋಧ?
ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ದೇಶದ ಮಿಲಿಟರಿಯಲ್ಲಿ ಸೇವೆ ಮಾಡಲು ಯುವ ಜನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಆರಂಭಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ
4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ.