ಅಮೆರಿದ (America) ಟಾಪ್ ಸೀಕ್ರೆಟ್ ಪ್ರದೇಶ ಅದು ಏರಿಯಾ 51 (Area 51) ಎಂತಲೇ ಹೆಸರುವಾಸಿ. ಸಾರ್ವಜನಿಕರಿಗೆ ನಿಷೇಧವಾಗಿರುವ ನೇವಾಡದಲ್ಲಿರುವ ಈ ಏರಿಯಾ 51 ಪ್ರದೇಶದಲ್ಲಿ ದಶಕಗಳವರೆಗೆ ಏಲಿಯನ್‌ಗಳು (America) ನೆಲೆಸಿ, ಅಲ್ಲಿ ಅವಿತು ಕುಳಿತಿವೆ ಎಂಬುದಕ್ಕೆ ಸಾಕ್ಷಿಗಳನ್ನು ನಿರಂತರವಾಗಿ ಹುಡುಕಲಾಗಿದೆ. ಆದರೆ ಇಲ್ಲಿಯವರೆಗೆ ಇದಕ್ಕೆ ಯಾವುದೇ ದೃಢ ಸಾಕ್ಷಿಗಳು ದೊರೆತಿಲ್ಲ. ಏಲಿಯನ್‌ಗಳ ಅಸ್ತಿತ್ವ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಏರಿಯಾ 51 ಪ್ರದೇಶದ ಸುತ್ತಲಿರುವ ಗೋಡೆಗಳ ಹಿಂದೆ ಏನು ನಡೆಯುತ್ತದೆ ಎಂಬುದು ಅತ್ಯಂತ ಕುತೂಹಲಕಾರಿಯಾಗಿರುವ ಸಂಗತಿಯಾಗಿದೆ.
ಏರಿಯಾ 51ರಲ್ಲಿ ಭದ್ರತೆ ಹೇಗಿದೆ?
ನೇವಾಡ ಮರುಭೂಮಿಯ ಮಧ್ಯಭಾಗದಲ್ಲಿ ಏರಿಯಾ 51 ಕಡೆಗೆ ಸಾಗುವ ಗೇಟ್ ಇದೆ. ಪ್ರದೇಶದ ಸುತ್ತಲೂ ಚೈನ್, ಮುಳ್ಳಿನ ಬೇಲಿ ಇದ್ದು, ಜನರನ್ನು ಬೆದರಿಸುವಂತಹ ಫಲಕಗಳನ್ನು ಹಾಕಲಾಗಿದೆ. ಗೇಟ್‌ನ ಆಚೆಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದು ಪ್ರತಿ ಕೋನವನ್ನೂ ವೀಕ್ಷಿಸುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟದಲ್ಲಿ ಪಿಕಪ್ ಟ್ರಕ್ ಒಂದು ಇದ್ದು, ಅದರೊಳಗಿರುವ ಸಿಬ್ಬಂದಿ ಪ್ರದೇಶದೊಳಗೆ ನುಸುಳಲು ಪ್ರತ್ನಿಸುವವರ ಬಗ್ಗೆ ಗಮನಹರಿಸುತ್ತಾರೆ ಎನ್ನಲಾಗಿದೆ. ಇನ್ನೂ ಕೆಲವರು ಆ ಪ್ರದೇಶದಲ್ಲಿ ಜನರು ಓಡಾಡಿದರೆ ಸಂವೇದಕಗಳ ಮೂಲಕ ಅದು ಸಿಬ್ಬಂದಿಗೆ ಸೂಚನೆ ನೀಡುವ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.
Advertisement
Advertisement
ಏರಿಯಾ 51 ಒಳಗಡೆ ಏನು ನಡೆಯುತ್ತೆ?
ಏರಿಯಾ 51 ಒಳಗಡೆ ನಿಖರವಾಗಿ ಏನು ನಡೆಯುತ್ತಿದೆ ಎಂಬುದು ದಶಕಗಳಿಂದ ಊಹಾಪೋಹಗಳಿಗೆ ಕಾರಣವಾಗಿದೆ. ಭೂಮಿಯನ್ನು ಅನ್ವೇಶಿಸಲು ಬಂದ ಏಲಿಯನ್‌ಗಳು ಇಲ್ಲಿ ಸಿಕ್ಕಿಹಾಕಿಕೊಂಡಿವೆ ಎಂಬ ವದಂತಿಗಳು ಇವೆ. ಇವುಗಳಲ್ಲೊಂದು 1942ರಲ್ಲಿ ನಡೆದ ರೋಸ್‌ವೆಲ್ ಅಪಘಾತ. ವಾಸ್ತವವಾಗಿ ಇದು ಸೋವಿಯತ್‌ನ ವಿಮಾನವಾಗಿದ್ದು, ಅದರ ಅವಶೇಷ ಏರಿಯಾ 51 ಪ್ರದೇಶದಲ್ಲಿ ಉಳಿದುಕೊಂಡಿದೆ.
Advertisement
ಈ ಎಲ್ಲಾ ವದಂತಿಗಳ ನಡುವೆಯೂ ಏರಿಯಾ 51 ಅಸ್ತಿತ್ವದಲ್ಲಿದ್ದು ಅದು ಇಂದಿಗೂ ಸಕ್ರಿಯವಾಗಿದೆ ಎಂಬುದು ನಿಜ. ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಕಟ ಹಾಗೂ ಮೇಲ್ವಿಚಾರಣೆಗೊಳಪಡಿಸಲಾದ ವ್ಯಕ್ತಿಗಳಿಗಷ್ಟೇ ತಿಳಿದಿದೆ. ಈ ಪ್ರದೇಶವನ್ನು ಅತ್ಯಂತ ಗೌಪ್ಯವಾಗಿ ಇರಿಸಿರುವ ಅಂಶ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಜನರು ಬಯಸುವಂತೆ ಮಾಡುತ್ತಿದೆ. ಈ ಪ್ರದೇಶದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿರುವುದಾಗಿ ಏರೋಸ್ಪೇಸ್ ಇತಿಹಾಸಕಾರ ಹಾಗೂ ಲೇಖಕ ಪೀಟರ್ ಮೆರ್ಲಿನ್ ತಿಳಿಸಿದ್ದಾರೆ.
Advertisement
ಏರಿಯಾ 51 ಅಸ್ತಿತ್ವಕ್ಕೆ ಬಂದಿದ್ದು ಹೇಗೆ?
ಏರಿಯಾ 51 ಯು-2 ಯುದ್ಧ ವಿಮಾನದ ಅಭಿವೃದ್ಧಿ ಹಾಗೂ ಪ್ರಯೋಗಗಳನ್ನು ನಡೆಸಲು ಆರಂಭಿಸಲಾಗಿತ್ತು. 2ನೇ ಮಹಾಯುದ್ಧದ ಬಳಿಕ ಸೋವಿಯತ್ ಒಕ್ಕೂಟ ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ತಗ್ಗಿಸಿತು. ಇದು ಪ್ರಪಂಚದಾದ್ಯಂತ ಗುಪ್ತಚರ ಚಟುವಟಿಕೆಗಳಿಗೆ ಪ್ರೇರಣೆ ನೀಡಿತು. 1950ರಲ್ಲಿ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವಿನ ಆಕ್ರಮಣವನ್ನು ಸೋವಿಯತ್ ಬೆಂಬಲಿಸಿದಾಗ ತನ್ನ ಪ್ರಭಾವವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ ಎಂಬುದು ಸ್ಪಷ್ಟವಾಯಿತು.
ಇದಾದ ಬಳಿಕ ಅಮೆರಿಕ ರಹಸ್ಯವಾಗಿ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಲು ಮುಂದಾಯಿತು. 1954ರಲ್ಲಿ ಅಧ್ಯಕ್ಷ ಐಸೆನ್‌ಹೋವರ್ ಯು-2 ಪ್ರೋಗ್ರಾಂ ಎಂದು ಕರೆಯಲ್ಪಡುವ ವಿಮಾನದ ರಹಸ್ಯ ಅಭಿವೃದ್ಧಿಯನ್ನು ಅನುಮೋದಿಸಿದರು. ಇದರ ತರಬೇತಿ ಹಾಗೂ ಪರೀಕ್ಷೆಗಾಗಿ ದೂರದ ಹಾಗೂ ರಹಸ್ಯವಾದ ಸ್ಥಳವನ್ನು ಹುಡುಕಲು ಮುಂದಾಯಿತು. ಇದಕ್ಕೆ ಆಯ್ಕೆ ಮಾಡಿಕೊಳ್ಳಲಾದ ಸ್ಥಳವೇ ಈ ನೇವಾಡದ ಮರುಭೂಮಿ ಪ್ರದೇಶ.
ನೇವಾಡದ ಮಧ್ಯಭಾಗದಲ್ಲಿರುವ ಈ ಒಂದು ನಿರ್ದಿಷ್ಟ ಪ್ರದೇಶವೇ ಉನ್ನತ ರಹಸ್ಯ ಮಿಲಿಟರಿ ನೆಲೆಯಾಗಿದೆ. 1954ರಲ್ಲಿ ಇಲ್ಲಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಾಗೂ ಅವರ ಮನವೊಲಿಸುವಂತೆ ಮಾಡಲು ಯು-2 ಯೋಜನೆಯ ಪ್ರಮುಖ ಎಂಜಿನಿರ್‌ಗಳಲ್ಲಿ ಒಬ್ಬರಾದ ಕೆಲ್ಲಿ ಜಾನ್ಸನ್ ಇದಕ್ಕೆ ವಿಭಿನ್ನವಾಗಿ ಏರಿಯಾ 51 ಎಂದು ಹೆಸರು ನೀಡಿದರು. ಇದನ್ನೂ ಓದಿ: ಭೂಕಂಪ, ಸುನಾಮಿ ಸಂಭವಿಸಿದರೂ ಜಪಾನ್‌ನಲ್ಲಿ ಜಾಸ್ತಿ ಹಾನಿಯಾಗಲ್ಲ ಯಾಕೆ? ದೇಶ ಹೇಗೆ ಎದುರಿಸುತ್ತೆ?
1955ರಲ್ಲಿ ಯು-2 ಪರೀಕ್ಷೆಯನ್ನು ಪ್ರಾರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಳೀಯರು ಆಕಾಶದಲ್ಲಿ ವಿಚಿತ್ರ ವಸ್ತುಗಳು ಹಾರಾಡಿರುವ ಬಗ್ಗೆ ವರದಿ ಮಾಡಿದ್ದರು. ಇದು ಅನ್ಯಲೋಕದ ವಿಮಾನಗಳಿರಬಹುದೆಂದು ಹಲವರು ಊಹಿಸಿದರು. ಆದರೆ ವಾಯುಪಡೆ ಅಧಿಕಾರಿಗಳಿಗೆ ಈ ಹಾರುವ ವಸ್ತುಗಳು ಯು-2 ಪರೀಕ್ಷೆಗೆ ಸಂಬಂಧಪಟ್ಟಿರುವುದು ಎಂಬುದು ತಿಳಿದಿದ್ದರೂ ಇದರ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಅವಕಾಶವಿರಲಿಲ್ಲ ಎನ್ನಲಾಗಿದೆ.
ಇಂತಹ ಒಂದು ನಿಗೂಢ ಪ್ರದೇಶವೇ ಇಲ್ಲ ಎಂದು ವಾದಿಸಿಕೊಂಡು ಬಂದಿದ್ದ ಅಮೆರಿಕ 2013ರಲ್ಲಿ ಏರಿಯಾ 51ರ ಅಸ್ತಿತ್ವವನ್ನು ದೃಢೀಕರಿಸಿದೆ. ಯು-2 ಕಾರ್ಯಾಚರಣೆಗಳು 2050ರ ದಶಕದ ಅಂತ್ಯದಲ್ಲೇ ಸ್ಥಗಿತಗೊಂಡಿದೆ. ಆದರೆ ಇತರ ಉನ್ನತ ರಹಸ್ಯ ಮಿಲಿಟರಿ ವಿಮಾನಗಳನ್ನು ಏರಿಯಾ 51ನಲ್ಲಿ ಪರೀಕ್ಷೆಗೆ ಒಳಪಡಿಸುವುದನ್ನು ಮುಂದುವರಿಸಲಾಗುತ್ತಿದೆ. ಎ-12, ಬರ್ಡ್ ಆಫ್ ಪ್ರೇ, ಎಫ್-117ಎ ಗಳಂತಹ ಹಲವಾರು ರಹಸ್ಯ ವಿಮಾನಗಳನ್ನು ನೇವಾಡದ ಪ್ರದೇಶದಲ್ಲೇ ಅಭಿವೃದ್ಧಿಪಡಿಸಿ ಪರೀಕ್ಷಿಸಲಾಗಿದೆ. ಆದರೆ 1989ರಲ್ಲಿ ಎಂಜಿನಿಯರ್ ಬಾಬ್ ಲಾಜರ್ ಅವರು ನೀಡಿದ ಒಂದು ಸಂದರ್ಶನ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅವರು ಲಾಸ್ ವೆಗಾಸ್ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಬೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅನ್ಯಲೋಕದ ಬಾಹ್ಯಾಕಾಶ ನೌಕೆಯನ್ನು ಸರಿಪಡಿಸಲು ಹಾಗೂ ವಾಪಸ್ ಕಳುಹಿಸಲು ಸಹಾಯ ಮಾಡಿದ್ದಾಗಿ ತಿಳಿಸಿದ್ದರು. ಇದು ಏರಿಯಾ 51ನಲ್ಲಿ ಏಲಿಯನ್‌ಗಳು ಇದ್ದವು ಎಂಬ ಊಹೆಯನ್ನು ಮತ್ತಷ್ಟು ಗಾಢಗೊಳಿಸಿತು. ಆದರೆ ಏರಿಯಾ 51ನ ಇತರ ಎಂಜಿನಿಯರ್, ಉದ್ಯೋಗಿಗಳು ಸೇರಿದಂತೆ ಅನೇಕರು ಇದನ್ನು ಕಾಲ್ಪನಿಕ ಕಥೆ ಎಂದು ತಳ್ಳಿಹಾಕದರು. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?
ಸತ್ಯವೋ ಅಥವಾ ಕಾಲ್ಪನಿಕವೋ ಆದರೆ ಏರಿಯಾ 51ರ ಪಶ್ಚಿಮಕ್ಕೆ ಏಲಿಯನ್ ಕ್ಯಾಟ್ ಹೌಸ್ ಅನ್ನು ಮಾಡಲಾಗಿದೆ. ಇದು ಏಲಿಯನ್‌ಗಳ ಸಂಶೋಧನಾ ಕೇಂದ್ರವಾಗಿದೆ. ಇದು ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿಯೂ ಸೆಳೆಯುತ್ತಿದೆ.
Web Stories