ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿ (Silicon Valley) ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ (Signature Bank) ಪತನಗೊಂಡ ಬೆನ್ನಲ್ಲೇ ಇದೀಗ ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ (First Republic Bank) ಕೂಡಾ ಪತನಗೊಂಡು ಅಮೆರಿಕಾದ (America) ಬ್ಯಾಂಕಿಂಗ್ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಹೊಡೆತವನ್ನು ನೀಡಿದೆ.
ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಅಮೆರಿಕ ಮುಂಚೂಣಿಯಲ್ಲಿದೆ. 2 ತಿಂಗಳ ಹಿಂದಷ್ಟೆ ಅಮೆರಿಕದ ಜನಪ್ರಿಯ ಬ್ಯಾಂಕ್‌ಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಪತನಗೊಂಡಿದ್ದವು. ಇದರಿಂದ ಗ್ರಾಹಕರಲ್ಲಿ ಮೂಡಿದ್ದ ಆತಂಕವೇ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನಕ್ಕೆ ಕಾರಣವಾಗಿದೆ. ರಿಪಬ್ಲಿಕ್ ಬ್ಯಾಂಕ್ ದಿವಳಿ ಅಂಚಿಗೆ ಸಿಲುಕಿದ ಹಿನ್ನೆಲೆ ಕ್ಯಾಲಿಫೋರ್ನಿಯಾದ ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ
Advertisement
Advertisement
ಸಂಕಷ್ಟಕ್ಕೆ ಸಿಲುಕಿದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ (JPMorgan Chase & Co.) ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಸ್ತಿ ಮತ್ತು ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಂಪನಿ ನೋಡಿಕೊಳ್ಳುವುದರಿಂದ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ. ಇದನ್ನೂ ಓದಿ: ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ
Advertisement
Advertisement
1985ರಲ್ಲಿ ಪ್ರಾಂಭವಾದ ರಿಪಬ್ಲಿಕ್ ಬ್ಯಾಂಕ್ ಶ್ರೀಮಂತರನ್ನು ಗುರಿಯಾಗಿರಿಸಿಕೊಂಡು ಉತ್ತಮ ಸೇವೆಗಳನ್ನು ಒದಗಿಸುತ್ತಿತ್ತು. 2000 ಇಸವಿಯ ವೇಳೆಗೆ ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2022ರ ವರ್ಷಾಂತ್ಯದಲ್ಲಿ ಅಮೆರಿಕದ 7 ರಾಜ್ಯಗಳಲ್ಲಿ 80 ಶಾಖೆ ಹಾಗೂ 7,000 ಸಿಬ್ಬಂದಿಯನ್ನು ಹೊಂದಿತ್ತು. ಇದನ್ನೂ ಓದಿ: ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ
ಏಪ್ರಿಲ್ 13ಕ್ಕೆ ಅನುಗುಣವಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್ 18 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ 8.4 ಲಕ್ಷ ಕೋಟಿ ರೂ. ಠೇವಣಿ ಹೊಂದಿತ್ತು. ಆದರೆ ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಪತನಗೊಂಡ ಬಳಿಕ ಜನರು ಆತಂಕಗೊಂಡು ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನಿಂದ ತಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕೇವಲ ಒಂದು ತಿಂಗಳಲ್ಲಿ ಜನರು 8.1 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ರಿಪಬ್ಲಿಕ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಯಿತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್