ಕತಾರ್: ಫಿಫಾ ವಿಶ್ವಕಪ್ (FIFA World Cup) ಪ್ರಾರಂಭದ ವೇಳೆ ಕತಾರ್‌ನಲ್ಲಿ (Qatar) ‘LGBTQ’ ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಬಣ್ಣಹೊಂದಿದ್ದ ಶರ್ಟ್ (Rainbow Shirt) ಧರಿಸಿದ್ದಕ್ಕಾಗಿ ಬಂಧಿತರಾಗಿದ್ದ ಅಮೆರಿಕದ ಪತ್ರಕರ್ತ (American Journalist) ಗ್ರಾಂಟ್ ವಾಲ್ ಅವರು ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಶನಿವಾರ ತಿಳಿಸಿದ್ದಾರೆ.
ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವರದಿ ಮಾಡುತ್ತಿದ್ದ ವೇಳೆ ಗ್ರಾಂಟ್ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿನ ಹಿಂದೆ ಕತಾರ್ ಸರ್ಕಾರ ಭಾಗಿಯಾಗಿದೆ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.
Advertisement
Advertisement
ಈ ಬಗ್ಗೆ ತಿಳಿಸಿರುವ ಎರಿಕ್, ನಾನು ಸಲಿಂಗಕಾಮಿ ಎಂದು ಗ್ರಾಂಟ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋವೊಂದರಲ್ಲಿ ಹೇಳಿದ್ದರು. ಅವರು ವಿಶ್ವಕಪ್‌ಗೆ ಮಳೆಬಿಲ್ಲಿನ ಶರ್ಟ್ ಧರಿಸಲು ನಾನೇ ಕಾರಣ. ನನ್ನ ಸಹೋದರ ಆರೋಗ್ಯವಾಗಿದ್ದ. ಆದರೆ ಅಲ್ಲಿ ನಡೆದಿರುವ ಘಟನೆಗಳ ಬಳಿಕ ಆತನಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಆತ ನನಗೆ ಹೇಳಿದ್ದ. ಆತ ಸತ್ತಿದ್ದಾನೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಆತನ ಕೊಲೆಯಾಗಿದೆ ಎಂಬ ಶಂಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ
Advertisement
ಇತ್ತೀಚೆಗೆ ವಿಶ್ವಕಪ್ ಆರಂಭದಲ್ಲಿ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ವೇಲ್ಸ್ ವಿರುದ್ಧ ಅಮೆರಿಕದ ಆರಂಭಿಕ ಪಂದ್ಯಕ್ಕೆ ವಿಶ್ವಕಪ್‌ನ ಭದ್ರತಾ ತಂಡ ನನ್ನನ್ನು ತಡೆದಿತ್ತು. ನಾನು ಧರಿಸಿದ್ದ ರೈನ್‌ಬೋ ಶರ್ಟ್ ಅನ್ನು ತೆಗೆಯುವಂತೆ ಕೇಳಿಕೊಳ್ಳಲಾಗಿತ್ತು. ಈ ಘಟನೆಯ ಬಗ್ಗೆ ಟ್ವೀಟ್ ಮಾಡಲು ಹೊರಟಾಗ ನನ್ನ ಫೋನ್ ಅನ್ನು ಕಿತ್ತುಕೊಳ್ಳಲಾಗಿತ್ತು ಎಂದು ಗ್ರಾಂಟ್ ಈ ಹಿಂದೆ ಆರೋಪಿಸಿದ್ದರು.
Advertisement
ಈ ಘಟನೆಯ ಬಳಿಕ ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದಾರೆ. ಹಾಗೂ ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು ಎಂದಿದ್ದರು. ಇದನ್ನೂ ಓದಿ: ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!