ಪುಣೆ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಅಮೇರಿಕದ ಸಂಗೀತ ನಿರ್ಮಾಪಕ ಹಾಗೂ ಖ್ಯಾತ ಡಿಜೆ ಮಾರ್ಷ್ ಮೆಲ್ಲೋ ಅವರು ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದಾರೆ.
My prayers go out to those affected by the Pulwama attack. ????????????????????
— marshmello (@marshmello) February 15, 2019
ಭಾನುವಾರದಂದು ಪುಣೆಯಲ್ಲಿ ನಡೆದ ವಿಎಚ್1 ಸೂಪರ್‍ಸೋನಿಕ್ 2019ರ ಸಂಗೀತ ಕಾರ್ಯಕ್ರಮಕ್ಕೆ ಮಾರ್ಷ್ ಮೆಲ್ಲೋ ಆಗಮಿಸಿದ್ದರು. ಈ ವೇಳೆ ತಮ್ಮ ಡಿಜೆ ಕಾರ್ಯಕ್ರಮವನ್ನು ಆರಂಭಿಸುವ ಮುನ್ನ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಮಾಡಿ ವೀರರಿಗೆ ನಮನ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೇ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ನಮನ ಎಂದು ಬರೆದು ಮಾರ್ಷ್ ಮೆಲ್ಲೋ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಈ ಸಂಗೀತ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ವದೇಶಿ ಕಲಾವಿದರು ತಮ್ಮ ಸಂಗೀತ ಕಾರ್ಯಕ್ರಮ ನೀಡಿದರು. ಆದರೇ ಯಾರು ಕೂಡ ಪುಲ್ವಾಮ ದಾಳಿಯನ್ನು ನೆನೆಪಿಸಿಕೊಳ್ಳಲಿಲ್ಲ. ವಿದೇಶಿ ಕಲಾವಿದರಾದರೂ ಮಾರ್ಷ್ ಮೆಲ್ಲೋ ಅವರು ಭಾರತದ ವೀರ ಯೋಧರಿಗೆ ನಮನ ಸಲ್ಲಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv