Connect with us

Cricket

ಕೊಹ್ಲಿ ಹೇಳಿಕೆ ಟ್ವೀಟಿಸಿದ ಪೋರ್ನ್ ನಟಿ-ಟ್ರೋಲ್‍ಗೊಳಗಾದ ಅನುಷ್ಕಾ ಶರ್ಮಾ

Published

on

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಡಿಮೆ ವಯಸ್ಸಿನಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಕೊಹ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿ ತಮ್ಮ ಈ ಸಾಧನೆಗೆ ಆತ್ಮಸ್ಥೈರ್ಯ ಹಾಗೂ ಕಠಿಣ ಪರಿಶ್ರಮ ಕಾರಣ ಎಂದು ತಿಳಿಸಿದ್ದರು. ಇದೇ ಮಾತನ್ನು ಅಮೆರಿಕದ ಅಡಲ್ಟ್ ಸ್ಟಾರ್ ರಿಚೆಲ್ಲೆ ರ‍್ಯಾನ್ ಕೂಡ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

ರಿಚೆಲ್ಲೆ ರ‍್ಯಾನ್ ಟ್ವೀಟ್ ಕಂಡ ಹಲವು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕೆಲ ನೆಟ್ಟಿಗರು ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಭಿನ್ನ ಸನ್ನಿವೇಶದ ದೃಶ್ಯಗಳು ಹಾಗೂ ಫೋಟೋ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಸೆಪ್ಟೆಂಬರ್ 28ರಂದು ಅನುಷ್ಕಾ ಶರ್ಮಾ ಅಭಿನಯದ ಸೂಯಿಧಾಗ ಚಿತ್ರ ತೆರೆಕಂಡಿತ್ತು. ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗೃಹಿಣಿಯಾಗಿ ಕಾಣಿಸಿಕೊಂಡಿರುವ ಅನುಷ್ಕಾ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸೂಯಿಧಾಗಾ ಚಿತ್ರದ ಟ್ರೇಲರ್ ಬಿಡುಗಡೆಗೊಂಡಾಗಲೂ ಅನುಷ್ಕಾರ ‘ಮಮತಾ’ ಪಾತ್ರದ ವಿವಿಧ ಭಂಗಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈಗ ಅದೇ ಸಿನಿಮಾದ ಫೋಟೋಗಳು ರಿಚೆಲ್ಲೆ ಟ್ವೀಟ್‍ಗೆ ಉತ್ತರ ನೀಡುವಂತೆ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ.

ರಿಚೆಲ್ಲಾ ರ‍್ಯಾನ್ ಅವರ ಟ್ವೀಟ್‍ಗೆ ಹಲವರು ಟ್ವಿಟ್ಟಿಗರು ಅನುಷ್ಕಾರ ಫೋಟೋ ಹಾಕಿ, ಅತ್ತಿಗೆ ಏನಾಗುತ್ತಿದೆ ಎಂದು ನೋಡಿ ಹಾಸ್ಯವಾಗಿ ಬರೆದಿದ್ದಾರೆ. ಮತ್ತೆ ಕೆಲವರು ರಿಚೆಲ್ಲಾ ಹೇಳಿಕೆಗೆ ದ್ವಂಧ್ವ ಅರ್ಥ ನೀಡುವಂತೆ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರಿಚೆಲ್ಲಾರ ಒಂದು ಟ್ವೀಟ್ ಮತ್ತೊಮ್ಮೆ ಅನುಷ್ಕಾರ ಸೂಯಿಧಾಗ ಸಿನಿಮಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುವಂತೆ ಮಾಡಿವೆ.

ಏಷ್ಯಾ ಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದು, ಮೊದಲ ಪಂದ್ಯದಲ್ಲೇ ಭರ್ಜರಿ ಜಯಗಳಿಸಿದ್ದಾರೆ. ಈ ನಡುವೆ ಕೊಹ್ಲಿ ಪತ್ನಿಯ ಸಿನಿಮಾಗಳಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ಸೂಯಿಧಾಗ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಕೂಡ ಮಾಡಿದ್ದ ಕೊಹ್ಲಿ, `ಎಂತಹಾ ಇಮೋಷನಲ್ ಸಿನಿಮಾ ಇದು. ಮಮತಾ ಪಾತ್ರದ ಅಭಿನಯ ನನ್ನ ಹೃದಯ ಕದ್ದಿತು. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಯಾರೂ ಮಿಸ್ ಮಾಡಬೇಡಿ’ ಎಂದು ಕೊಹ್ಲಿ ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Click to comment

Leave a Reply

Your email address will not be published. Required fields are marked *