ಮುಂಬೈ: 2023ರ ಏಕದಿನ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಮೊದಲ ತಂಡವಾಗಿ ಟೀಂ ಇಂಡಿಯಾ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಕೇವಲ 55 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ ಭಾರತ, 302 ರನ್ಗಳ ವಿಶ್ವದಾಖಲೆಯ ಜಯ ಸಾಧಿಸಿದೆ. ಅದರಲ್ಲೂ ಲಂಕಾ ವಿರುದ್ಧ ಬೆಂಕಿ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶಮಿ ಮಾರಕ ಬೌಲಿಂಗ್ ಅಭಿಮಾನಿಗಳು ಮಾತ್ರವಲ್ಲದೇ ಅಮೆರಿಕದ ನೀಲಿ ತಾರೆಯ (American Actress) ಗಮನವನ್ನೂ ಸೆಳೆದಿದೆ.
Advertisement
ಹೌದು.. ಅಕ್ಟೋಬರ್ 29ರಂದು ಸಹ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಶಮಿ 7 ಓವರ್‌ಗಳಲ್ಲಿ ಕೇವಲ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ 40 ವಿಕೆಟ್ ಪಡೆದ 3ನೇ ಭಾರತೀಯ ಎಂಬ ವಿಶೇಷ ಸಾಧನೆ ಮಾಡಿದ್ದರು. ಈ ವೇಳೆ ಲಕ್ಷ್ಮಿ ರತನ್ ಶುಕ್ಲಾ ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಶಮಿ ಫೋಟೋ ಜೊತೆಗೆ ಹೀರೋ ಆಫ್ ದಿ ವೀಕ್ (ವಾರದ ಹೀರೋ) ಎಂದು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ರಿಯಾಕ್ಟ್ ಮಾಡಿದ ಕೇಂದ್ರ ಲಸ್ಟ್ (Kendra Lust), ಅಭಿನಂದನೆಗಳು ಎಂದು ಸೂಚಿಸುವ ಇಮೊಜಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಲಂಕಾ ವಿರುದ್ಧ ಶಮಿ 5 ವಿಕೆಟ್ ಪಡೆದು ಮಿಂಚಿದ ಬಳಿಕ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Advertisement
Advertisement
ಲಂಕಾ ವಿರುದ್ಧ ಕೇವಲ 5 ಓವರ್ ಬೌಲಿಂಗ್ ಮಾಡಿದ ಶಮಿ, 18 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾ ಪರ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿಯನ್ನೂ ಗಳಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ತಾನು ಆಡಿದ ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಶಮಿ, ಆ ಮೂಲಕ ವಿಶ್ವಕಪ್ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ 44 ವಿಕೆಟ್ಗಳ ಜಂಟಿ ದಾಖಲೆಯನ್ನ ನುಚ್ಚು ನೂರು ಮಾಡಿದ್ರು. ಇದನ್ನೂ ಓದಿ: World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ
Advertisement
ಸದ್ಯ ಮೊಹಮ್ಮದ್ ಶಮಿ 14 ವಿಶ್ವಕಪ್ ಪಂದ್ಯಗಳನ್ನಾಡಿರುವ ಶಮಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 45 ವಿಕೆಟ್ ಪಡೆದು ನಂ.1 ಸ್ಥಾನದಲ್ಲಿದ್ದರೆ, 44 ವಿಕೆಟ್ ಪಡೆದ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. 33 ವಿಕೆಟ್ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಮತ್ತು 31 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ಮತ್ತೆ ಶತಕ ಮಿಸ್ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ
Web Stories