ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಮಿಳು ನಟ ನಯನತಾರಾ, ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್ ಚಿತ್ರತಂಡ ಸೇರಿಕೊಂಡ ಬಳಿಕ ಅಮೆರಿಕದ ನಟ ಕಿಲಿ ಪೌಲ್ (Kyle Paul) ‘ಟಾಕ್ಸಿಕ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇಂತಹದೊಂದು ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
View this post on Instagram
ಈಗಾಗಲೇ ಯಶ್ ಸಿನಿಮಾಗೆ ನಯನತಾರಾ ಎಂಟ್ರಿ ಕೊಟ್ಟಿದಾಗಿದೆ. ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದರ ನಡುವೆ ಅಮೆರಿಕದ ಖ್ಯಾತ ನಟ ಕಿಲಿ ಪೌಲ್ ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ
ಅಂದಹಾಗೆ, ಯಶ್ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣಕ್ಕೆ ಸಾಥ್ ನೀಡಿದೆ.