ವಾಷಿಂಗ್ಟನ್: ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಅಮೆರಿಕ ಸುಧಾರಿತ ರಾಕೆಟ್ ಸಿಸ್ಟಮ್‌ಗಳನ್ನು ಕಳುಹಿಸಲು ಒಪ್ಪಿಕೊಂಡಿದೆ.
ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ 700 ಮಿಲಿಯನ್ ಡಾಲರ್(ಸುಮಾರು 5 ಸಾವಿರ ಕೋಟಿ ರೂ.) ಮೌಲ್ಯದ ಶಸ್ತ್ರಾಸ್ತ್ರ ಪ್ಯಾಕೇಜ್ ಅನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಕಳುಹಿಸುತ್ತಿರುವ ಸುಧಾರಿತ ಲಾಂಗ್‌ರೇಂಜ್ ರಾಕೆಟ್ ಸಿಸ್ಟಮ್‌ಗಳು ರಷ್ಯಾದ ಕ್ಷಿಪಣಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮಾಣು ಅಸ್ತ್ರ ಬಳಸಿದರೆ, ಯುಎನ್‌ಗೆ ನಿರ್ಬಂಧ ಕಠಿಣಗೊಳಿಸಲು ಯತ್ನಿಸುತ್ತೇವೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ
Advertisement
Advertisement
ಅಮೆರಿಕ ಕಳುಹಿಸುತ್ತಿರುವ ಸುಧಾರಿತ ರಾಕೆಟ್ ಸಿಸ್ಟಮ್‌ಗಳು 80 ಕಿಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ರಷ್ಯಾ ಹಾಗೂ ಉಕ್ರೇನ್ ಯುದ್ಧ ರಾಜತಾಂತ್ರಿಕತೆಯ ಮೂಲಕ ಕೊನೆಗೊಳ್ಳುತ್ತದೆ. ಆದರೂ ಉಕ್ರೇನ್ ರಕ್ಷಣೆಗೆ ಅಮೆರಿಕ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಬೈಡನ್ ತಿಳಿಸಿದ್ದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭ ಹೊಂದಿದೆ: ಪಾಕ್ ಪ್ರಧಾನಿ
Advertisement
ಈ ಹಿನ್ನೆಲೆಯಲ್ಲಿ ಬೈಡನ್, ಉಕ್ರೇನ್‌ಗೆ ಹೆಚ್ಚು ಸುಧಾರಿತ ರಾಕೆಟ್ ಸಿಸ್ಟಮ್ ಹಾಗೂ ಇತರ ಅಸ್ತ್ರಗಳನ್ನು ಒದಗಿಸಲು ನಿರ್ಧರಿಸಿದ್ದೇನೆ. ಅವು ಉಕ್ರೇನ್‌ಗೆ ತನ್ನ ಮೇಲೆ ದಾಳಿ ನಡೆಸಬಹುದಾದ ಗುರಿಯನ್ನು ನಿಖರವಾಗಿ ಹೊಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.