ವಾಷಿಂಗ್ಟನ್: ಕತಾರ್‌ನಲ್ಲಿ (Qatar) ನಡೆದ 2022ರ ಫಿಫಾ ವಿಶ್ವಕಪ್‍ಗೆ (FIFA World Cup) ತೆರೆ ಬಿದ್ದಿದೆ. ಅದ್ಧೂರಿಯಾಗಿ 29 ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಅರ್ಜೆಂಟಿನಾ (Argentina) ಗೆಲ್ಲುವ ಮೂಲಕ ಮೆಸ್ಸಿಗೆ ಸ್ಮರಣೀಯ ವಿದಾಯ ನೀಡಿದೆ. ಇದರೊಂದಿಗೆ 2026ರ ಫಿಪಾ ವಿಶ್ವಕಪ್‍ಗೆ (FIFA World Cup 2026) ಅಮೆರಿಕ (America) ಹಾಯ್ ಹಲೋ ಎಂದಿದೆ.
Advertisement
ಕಾಲ್ಚೆಂಡಿನಾಟ ಕತಾರ್‌ನಲ್ಲಿ ಕೇಳಿ ಕಂಡರಿಯದ ರೀತಿ ಯಶಸ್ವಿಯಾಗಿದೆ. ಇದೀಗ ಅಭಿಮಾನಿಗಳ ಚಿತ್ತ 2026 ಫಿಫಾ ವಿಶ್ವಕಪ್‍ನತ್ತ ನೆಟ್ಟಿದೆ. ಅಮೆರಿಕ ಸೇರಿದಂತೆ 3 ದೇಶಗಳ ಜಂಟಿ ಆತಿಥ್ಯದಲ್ಲಿ 2026ರ ಫಿಫಾ ವಿಶ್ವಕಪ್ ನಡೆಯಲಿದ್ದು, ಅಭಿಮಾನಿಗಳಿಗೆ ಮಹಾ ಸಮರದ ಹೊಸ ಮಾದರಿ ದರ್ಶನವಾಗಲಿದೆ. ಈ ಬಾರಿ ಸೇರಿದಂತೆ ಕಳೆದ 7 ಆವೃತ್ತಿಗಳಲ್ಲಿ ತಲಾ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡರೆ, 2026ರ ವಿಶ್ವಕಪ್‍ನಲ್ಲಿ 48 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ 64ರ ಬದಲು 80ಕ್ಕೆ ಏರಿಕೆಯಾಗಲಿವೆ. ಟೂರ್ನಿಗೆ ಆಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಲಿದ್ದು, 14 ನಗರಗಳಲ್ಲಿ ಪಂದ್ಯಗಳು ನಡೆಯಲಿದೆ. ಇನ್ನು 3 ವರ್ಷ 6 ತಿಂಗಳು ಮುಂದಿನ ಫಿಫಾ ವಿಶ್ವಕಪ್‌ಗೆ ಬಾಕಿ ಇದೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್, ನಗದು ಬಹುಮಾನ ಎಷ್ಟು?
Advertisement
Advertisement
ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ 3 ದೇಶಗಳು ವಿಶ್ವಕಪ್ ಆತಿಥ್ಯ ವಹಿಸಲಿವೆ. 2002ರಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಜಂಟಿ ಆತಿಥ್ಯ ವಹಿಸಿದ್ದವು. ಇದೀಗ ಮುಂದಿನ ವಿಶ್ವಕಪ್‍ಗಾಗಿ 3 ದೇಶಗಳು ತಯಾರಿ ಆರಂಭಿಸಿವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಟೂರ್ನಿ ನಡೆಯಲಿದೆ. ಈ ನಡುವೆ ಅಭಿಮಾನಿಗಳು ತಂಡಗಳ ಸಂಖ್ಯೆ ಏರಿಕೆ ಮಾಡುವುದರಿಂದ ವಿಶ್ವಕಪ್‍ನ ಗುಣಮಟ್ಟ ಕಡಿಮೆಯಾಗಲಿದೆ ಎಂದು ಅಪಸ್ವರ ಎತ್ತಿದ್ದಾರೆ. ಟೂರ್ನಿಯನ್ನು ಈಗಿರುವಂತೆ 32 ತಂಡಗಳಿದ್ದರೆ ಒಳ್ಳೆಯದೆಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್