ನಾಗರಿಕ ಪರಮಾಣು ಸಹಕಾರವನ್ನು (Civil nuclear cooperation) ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧಗಳನ್ನು ತಗೆದು ಹಾಕುವುದಾಗಿ ಅಮೆರಿಕದ ರಕ್ಷಣಾ ಸಲಹೆಗಾರ (US Defense Adviser) ಜೇಕ್ ಸುಲ್ಲಿವಾನ್ (Jake Sullivan) ತಿಳಿಸಿದ್ದಾರೆ.
ಭಾರತಕ್ಕೆ ಆಗಮಿಸಿದ್ದ ನಿರ್ಗಮಿತ ಅಮೆರಿಕ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ತಮ್ಮ ಎರಡು ದಿನಗಳ ಭಾರತ ಭೇಟಿಯಲ್ಲಿ ಪರಮಾಣು ತಂತ್ರಜ್ಞಾನದ ಕೆಲಸ ಮಾಡುತ್ತಿರುವ ಭಾರತದ ಸಂಸ್ಥೆಗಳ ಮೇಲೆ ಅಮೆರಿಕ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ತೆಗದುಹಾಕುವುದಾಗಿ ತಿಳಿಸಿದ್ದರು. ಈ ಕುರಿತು ಮಾತನಾಡಿದ ಅವರು ನಾನು ರಕ್ಷಣಾ ಸಲಹೆಗಾರನಾಗಿ ಇದು ನನ್ನ ಕೊನೆಯ ವಿದೇಶ ಪ್ರವಾಸವಾಗಿದೆ. ನನ್ನ ಅಂತಿಮ ಆಡಳಿತ್ಮಾಕ ವಿದೇಶ ಪ್ರವಾಸವು ಭಾರತಕ್ಕೆ ಭೇಟಿ ನೀಡುವುದರಿಂದ ಕೊನೆಗೊಳ್ಳುತ್ತಿದೆ. ಇನ್ನೂ, ಭಾರತದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧವನ್ನು ತೆರವು ಮಾಡುತ್ತಿರುವುದು ನನ್ನ ಪಾಲಿನ ಐತಿಹಾಸಿಕ ಸಾಧನೆಯಾಗಿದೆ ಎಂದಿದ್ದರು. ಈ ಮೂಲಕ ಅಮೆರಿಕ ಮತ್ತು ಭಾರತ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದರು.
Advertisement
Advertisement
2000 ದಲ್ಲಿ ಭಾರತವು ಪರಮಾಣು ರಾಷ್ಟ್ರವಾದಗಿನಿಂದಲೂ ತಕರಾರು ತಗೆದಿರುವ ಅಮೆರಿಕವು ಭಾರತದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತ್ತು. ಕಾಲನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೂ ಸಹ ಪರಮಾಣು ಕುರಿತು ಅಮೆರಿಕವು ಭಾರತದ ಮೇಲೆ ನಿರ್ಬಂಧವಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪ್ರಯತ್ನದಿಂದ ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೇಲಿನ ನಿರ್ಬಂಧ ತೆಗೆಯಲಾಗಿದೆ. ಇದರೊಂದಿಗೆ ಭಾರತದ ಪರಮಾಣು ಸಂಸ್ಥೆಗಳು ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಶ್ವದ ಇತರೆ ರಾಷ್ಟ್ರಗಳ ಪರಮಾಣು ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸಲು ಅನುಕೂಲವಾಗಲಿದೆ.
Advertisement
ಅಮೆರಿಕದಿಂದ ನಿರ್ಬಂಧ ಹೊಂದಿರುವ ಕೇಂದ್ರಗಳು: ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC), ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ (IGCAR), ಅಭರ್ ಟೆಕ್ನಾಲಜೀಸ್ ಎಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಅಗ್ರಿಮ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಅನಲಾಗ್ ಟೆಕ್ನಾಲಜಿ ಲಿಮಿಟೆಡ್
Advertisement
ಈ ಕೇಂದ್ರಗಳನ್ನು ನಿರ್ಬಂಧದ ಪಟ್ಟಿಯಿಂದ ತೆಗೆದುಹಾಕುವುದರೊಂದಿಗೆ ಭಾರತೀಯ ಸಂಸ್ಥೆಗಳು ಅಮೆರಿಕದ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದಾಗಿದೆ. ಇದರೊಂದಿಗೆ ರಕ್ಷಣಾ ವಲಯ ಸೇರಿದಂತೆ ಹಲವಾರು ಉದ್ದೇಶಗಳಿಗಾಗಿ ಪರಮಾಣು ತಂತ್ರಜ್ಞಾನದ ಪ್ರವೇಶವನ್ನು ಪಡೆಯಬಹುದಾಗಿದೆ.
ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದ್ದ ಆಪರೇಷನ್ ಶಕ್ತಿ: ಭಾರತ ಮೇ 1998 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಆಪರೇಷನ್ ಶಕ್ತಿ ಎಂಬ ಹೆಸರಿನಲ್ಲಿ ನಡೆದಿದ್ದ ಈ ಕಾರ್ಯಾಚರಣೆಯು ಹಲವಾರು ದೇಶಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದಕ್ಕೆ ಅಮೆರಿಕ ಸುಮಾರು 200ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಪ್ರತಿಕ್ರಿಯಿಸಿತ್ತು. ಅಲ್ಲದೇ ಹಲವಾರು ದೇಶಗಳಿಂದ ಆರ್ಥಿಕ ನಿರ್ಬಂಧಗಳಿಗೆ ಕಾರಣವಾಗಿತ್ತು.
1998ರ ಪರಮಾಣು ಪರೀಕ್ಷೆ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತ್ತು. ಮೇ 11, 1998ರಂದು ಭಾರತ ಪೋಖ್ರಾನ್‌ನಲ್ಲಿರುವ ತನ್ನ ಮಿಲಿಟರಿ ಪರೀಕ್ಷಾ ನೆಲೆಯಲ್ಲಿ ಮೂರು ಪರಮಾಣು ಬಾಂಬ್‌ಗಳನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಅದಾದ ಬಳಿಕ, ಮೇ 13ರಂದು ಭಾರತ ಇನ್ನೂ ಎರಡು ಬಾಂಬ್‌ಗಳನ್ನು ಪರೀಕ್ಷಿಸಲಾಗಿತ್ತು. ಭಾರತದ ಕೆಲವು ಪರಮಾಣು ಬಾಂಬ್‌ಗಳಂತೂ 200,000 ಟನ್‌ಗಳಷ್ಟು (200 ಕಿಲೋ ಟನ್) ಶಕ್ತಿಯುತವಾಗಿವೆ. ಈ ಪರೀಕ್ಷೆಗಳು ಭಾರತವೂ ಸಹ ಶಕ್ತಿಶಾಲಿ ಪರಮಾಣು ಶಸ್ತ್ರಗಳನ್ನು ತಯಾರಿಸಬಲ್ಲದು ಎಂಬ ಸಂದೇಶವನ್ನು ಜಗತ್ತಿಗೆ ಸಾರಿತ್ತು.
ಭಾರತದ ಅಣ್ವಸ್ತ್ರ ಸಾಮರ್ಥ್ಯದ ಅನಾವರಣ: ರಾಜಕೀಯ ಅಸ್ಥಿರತೆ ಮತ್ತು ಅಣ್ವಸ್ತ್ರ ಪರೀಕ್ಷೆ ನಡೆಸುವ ಇಚ್ಛಾಶಕ್ತಿಯ ಕೊರತೆಗಳ ನಡುವೆಯೇ ಒಂದಷ್ಟು ವರ್ಷಗಳು ಕಳೆದು ಹೋಗಿದ್ದವು. ಆದರೆ ಅದೃಷ್ಟವಶಾತ್ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ನಾಯಕತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸರ್ಕಾರ ರಚಿಸಿತ್ತು. ಅಧಿಕಾರಕ್ಕೆ ಬರುವ ಮುನ್ನ, ಎನ್‌ಡಿಎ ಭಾರತದ ಮಿಲಿಟರಿ ಸಾಮರ್ಥ್ಯಕ್ಕೆ ಅಣ್ವಸ್ತ್ರ ಸಾಮರ್ಥ್ಯವನ್ನೂ ಸೇರಿಸುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿಸಿತ್ತು.
1998ರಲ್ಲಿ, ಚೀನಾದ ಬೆಂಬಲದೊಡನೆ ಅಭಿವೃದ್ಧಿಪಡಿಸಿದ್ದ ಘೋರಿ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ವರ್ಷದ ಮೇ ತಿಂಗಳಲ್ಲಿ, ಪಾಕಿಸ್ತಾನದ ಸಾಮರ್ಥ್ಯಕ್ಕೆ ಭಾರತ ತನ್ನ ಆಪರೇಶನ್ ಶಕ್ತಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು. 1974ರಲ್ಲಿ, ಭಾರತ ತನ್ನ ಪರಮಾಣು ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಎಂದಿತ್ತಾದರೂ, 1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಸ್ಪಷ್ಟವಾಗಿ ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪುಗೊಂಡಿತ್ತು.
1998ರ ಭಾರತದ ಅಣ್ವಸ್ತ್ರ ಪರೀಕ್ಷೆಗಳ ಪರಿಣಾಮವಾಗಿ, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ಹೇರಿದವು. ಆದರೆ, ಈ ಬಾರಿಯ ಪ್ರತಿರೋಧಗಳು 1974ರಲ್ಲಿನ ಭಾರತದ ಮೊದಲ ಪರಮಾಣು ಪರೀಕ್ಷೆಗಳ ಸಂದರ್ಭದಲ್ಲಿದ್ದಷ್ಟು ತೀಕ್ಷ್ಣವಾಗಿರಲಿಲ್ಲ. ಕ್ಷಿಪ್ರವಾಗಿ ಬೆಳೆಯುತ್ತಿದ್ದ ಭಾರತದ ಆರ್ಥಿಕತೆ ಮತ್ತು ಭಾರತದ ಬೃಹತ್ ಮಾರುಕಟ್ಟೆಯನ್ನು ಬಳಸುವ ವಿದೇಶಗಳ ಹಂಬಲದ ಕಾರಣದಿಂದ ಭಾರತಕ್ಕೆ ಈ ಎಲ್ಲ ಟೀಕೆ, ಪ್ರತಿರೋಧಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಈ ಅಣ್ವಸ್ತ್ರ ಪರೀಕ್ಷೆಗಳು ಭಾರತಕ್ಕೆ ತನ್ನನ್ನು ತಾನು ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾಪಿಸಲೂ ಪೂರಕವಾಯಿತು.
`ಪಕ್ಷಪಾತಿ’ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ: 1960ರ ದಶಕದ ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳೆರಡೂ ಅಪಾರ ಸಂಖ್ಯೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದವು. ಇದರಿಂದಾಗಿ ಜಗತ್ತಿನಾದ್ಯಂತ ಜನರು ಅಣ್ವಸ್ತ್ರಗಳನ್ನು ಇಲ್ಲವಾಗಿಸುವ ಸಲುವಾಗಿ, ಅವುಗಳ ಪ್ರಸರಣವನ್ನು ತಡೆಯಬೇಕೆಂದು ಆಗ್ರಹಿಸಲಾಗಿತ್ತು. ಚೀನಾ ಸಹ ತನ್ನದೇ ಆದ ಅಣ್ವಸ್ತ್ರವನ್ನು ಪರೀಕ್ಷಿಸಿದಾಗ, ದೊಡ್ಡ ರಾಷ್ಟ್ರಗಳು ಇನ್ನಷ್ಟು ದೇಶಗಳು ಅಣ್ವಸ್ತ್ರ ಹೊಂದದಂತೆ ತಡೆಯಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯ ಹೊರಬಿದ್ದಿತ್ತು. ಇದು ಅಣ್ವಸ್ತ್ರಗಳ ಪ್ರಸರಣವನ್ನು ತಡೆಯುವ ಸಲುವಾಗಿ ಹೊಸ ಒಪ್ಪಂದವೊಂದನ್ನು ರೂಪಿಸಲು ಕೈಗೊಂಡ ಆರಂಭಿಕ ಹಂತವಾಗಿತ್ತು.
1968ರಲ್ಲಿ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ನಾನ್ ಪ್ರಾಲಿಫರೇಶನ್ ಟ್ರೀಟಿ) ಅಥವಾ ಎನ್‌ಪಿಟಿ ಅನ್ನು ರೂಪಿಸಲಾಯಿತು. ಈ ಒಪ್ಪಂದದ ಪ್ರಕಾರ, ಜನವರಿ 1, 1967ರ ಮುನ್ನ ಅಣ್ವಸ್ತ್ರ ಪರೀಕ್ಷೆ ನಡೆಸಿದ ರಾಷ್ಟ್ರಗಳು ಮಾತ್ರವೇ ಅಣ್ವಸ್ತ್ರ ಹೊಂದಬಹುದು ಎನ್ನಲಾಗಿತ್ತು. ಈ ನಿಗದಿತ ದಿನಕ್ಕಿಂತ ಮೊದಲು ಅಮೆರಿಕ, ರಷ್ಯಾ (ಹಿಂದಿನ ಸೋವಿಯತ್ ಒಕ್ಕೂಟ), ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಚೀನಾಗಳು ಮಾತ್ರವೇ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದವು. ಇನ್ನಷ್ಟು ಹೊಸ ದೇಶಗಳು ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯುವ ಉದ್ದೇಶವನ್ನು ಈ ಒಪ್ಪಂದ ಹೊಂದಿತ್ತು. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳೂ ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡರೂ, ಭಾರತ ಇದಕ್ಕೆ ಸಹಿ ಹಾಕಲು ನಿರಾಕರಿಸಿತ್ತು.
ಈ ಒಪ್ಪಂದ ಭಾರತದ ಕಳವಳಗಳಿಗೆ ಯಾವುದೇ ಉತ್ತರ ಕೊಡದಿದ್ದ ಕಾರಣ, ಭಾರತ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿತ್ತು. ಈ ಒಪ್ಪಂದ, ಈಗಾಗಲೇ ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನುವುದು ಭಾರತದ ಪ್ರಶ್ನೆಯಾಗಿತ್ತು.