ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಈ ಆದೇಶದಿಂದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದನ್ನು ವಿರೋಧಿಸುತ್ತಿರುವ ಮಹಿಳೆಯರು ‘ನಮ್ಮ ದೇಹ, ನಮ್ಮ ಹಕ್ಕು’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ
Advertisement
Advertisement
ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದೇಶದ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳು ಗರ್ಭಪಾತವನ್ನು ನಿರ್ಬಂಧಿಸುವ ನಿರೀಕ್ಷೆಯಿದೆ. ಮಹಿಳೆಯರು ತಮ್ಮ ಗರ್ಭಪಾತ ಮಾಡಿಸಲೇ ಬೇಕೆಂದರೆ ಅನುಮತಿಯಿರುವ ದೇಶಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಇದನ್ನೂ ಓದಿ: ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ
Advertisement
Advertisement
ಅಮೆರಿಕದಲ್ಲಿ ಗರ್ಭಪಾತದ ಹಕ್ಕನ್ನು ರದ್ದುಗೊಳಿಸಿದ್ದರೂ ವಾಲ್ಟ್ ಡಿಸ್ನಿ, ಮೆಟಾದಂತಹ ಹಲವಾರು ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರ್ಭಪಾತ ಮಾಡಿಸಲು ಇತರ ದೇಶಗಳಿಗೆ ಹೋಗಲು ಸಹಾಯ ಮಾಡುವುದಾಗಿ ತಿಳಿಸಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.