ನ್ಯೂಯಾರ್ಕ್: ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ದೊಡ್ಡ ಇತಿಹಾಸವನ್ನೇ ಹೊಂದಿದೆ. ಆದ್ದರಿಂದ ಅಮೇರಿಕ ಇಸ್ಲಾಮಾಬಾದ್‍ಗೆ ಒಂದು ಡಾಲರ್ ಕೂಡ ನೀಡಬಾರದು. ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಬುದ್ಧಿವಂತಿಕೆಯಿಂದ ನಿರ್ಬಂಧಿಸಿದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಭಾರತ-ಅಮೇರಿಕಾದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಶ್ಲಾಘಿಸಿದ್ದಾರೆ.
ಹ್ಯಾಲೆ ಅವರು `ಸ್ಟಾಂಡ್ ಅಮೇರಿಕಾ ನೌ’ ಎನ್ನುವ ಹೊಸ ನೀತಿಯನ್ನು ಜಾರಿಗೆ ತಂದಿದ್ದಾರೆ. ಈ ನೀತಿಯು ಅಮೆರಿಕವನ್ನು ಹೇಗೆ ಸುರಕ್ಷಿತವಾಗಿ, ಬಲಿಷ್ಠವಾಗಿ ಹಾಗೂ ಶ್ರೀಮಂತವಾಗಿ ಇಡಲು ಯಾವುದರ ಬಗ್ಗೆ ಪ್ರಮುಖ್ಯತೆಯನ್ನು ನೀಡಬೇಕು ಹಾಗೂ ಉತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರಗಳಿಗೆ ಆರ್ಥಿಕವಾಗಿ ನೆರವನ್ನು ನೀಡುವುದರ ಬಗ್ಗೆ ಗಮನ ವಹಿಸುತ್ತದೆ. ಹಾಗೆಯೇ ಯುಎಸ್‍ನ ಔದಾರ್ಯತೆಗೆ ಪ್ರತಿಫಲವನ್ನು ಕೇಳುವುದು ನ್ಯಾಯವಾದ ಹಕ್ಕು. ಆದ್ರೆ ಪಾಕಿಸ್ತಾನ ಯುಎಸ್‍ನ ಹಲವು ನಿರ್ಧಾರವನ್ನು ವಿರೋಧಿಸುತ್ತಲೇ ಬಂದಿದೆ ಎಂದಿದ್ದಾರೆ.
Advertisement
Advertisement
2017ರಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಸುಮಾರು 1 ಬಿಲಿಯನ್ ಡಾಲರ್(6.5 ನೂರು ಕೋಟಿ ರೂ) ಹಣವನ್ನು ವಿದೇಶಿ ಆರ್ಥಿಕ ನೆರವಿನಲ್ಲಿ ನೀಡಲಾಗಿತ್ತು. ಈ ನೆರವಿನಲ್ಲಿ ಹೆಚ್ಚು ಹಣವನ್ನು ಪಾಕಿಸ್ತಾನ ತನ್ನ ಸೈನ್ಯಕ್ಕಾಗಿ ಉಪಯೋಗಿಸಿಕೊಂಡಿತ್ತು. ಅಲ್ಲದೆ ಇನ್ನುಳಿದ ಹಣವನ್ನು ಪಾಕಿಸ್ತಾನಿ ಪ್ರಜೆಗಳಿಗಾಗಿ ರಸ್ತೆ, ಹೆದ್ದಾರಿ, ಶಕ್ತಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲು ಬಳಸಿಕೊಳ್ಳಲಾಗಿತ್ತು. ಅದಕ್ಕೆ ಹ್ಯಾಲೆ ಅವರು ವಿದೇಶಿ ಆರ್ಥಿಕ ನೆರವನ್ನು ಕೇವಲ ಸ್ನೇಹಿತರಿಗೆ ಮಾತ್ರ ನೀಡಬೇಕು ಅಂತ ಪ್ರತಿಪಾದಿಸಿದ್ದಾರೆ.
Advertisement
Advertisement
ವಿಶ್ವಸಂಸ್ಥೆಯಲ್ಲಿ ಎಲ್ಲಾ ರಾಷ್ಟ್ರಗಳು ಒಂದೆಡೆಯಾದರೇ, ಪಾಕಿಸ್ತಾನವೇ ಒಂದೆಡೆ ನಿಂತಿರುತ್ತದೆ. ಅನೇಕ ಬಾರಿ ಅಮೆರಿಕದ ನಿರ್ಧಾರವನ್ನು ಅದು ವಿರೋಧಿಸಿದೆ. ಉಗ್ರರರಿಗೆ ಆಶ್ರಯ ನೀಡುತ್ತಿದೆ. ಅಮೇರಿಕ ವಿರುದ್ಧ ಇರುವ ಪಾಕಿಸ್ತಾನಕ್ಕೆ ಏಕೆ ನಾವು ನೆರವನ್ನು ಕೊಡಬೇಕು? ಪಾಕ್ ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ಭಯೋತ್ಪಾದನೆಗೆ ಕುಮ್ಮಕ್ಕು ನೀಡದೇ, ಆಶ್ರಯ ನೀಡದೇ ಬುದ್ಧಿ ಕಲಿತುಕೊಂಡರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv