ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚಿಗಷ್ಟೆ ಅಮೆರಿಕ (America) ದೇಶಕ್ಕೆ ಭೇಟಿ ನೀಡಿದ್ದರು. ಇದಾದ ಕೆಲವೇ ಕೆಲವು ದಿನಗಳಲ್ಲಿ ಭಾರತಕ್ಕೆ ಸಂಬಂಧಿಸಿದ 105 ಪುರಾತನ ವಸ್ತುಗಳನ್ನು (Antique) ಅಮೆರಿಕಾ ಅಧಿಕಾರಿಗಳು ಭಾರತಕ್ಕೆ (India) ಹಸ್ತಾಂತರಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿರುವ (New York) ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ವಿಶೇಷ ವಾಪಸಾತಿ ಸಮಾರಂಭದಲ್ಲಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು (Taranjit Singh Sandhu), ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ (Randhir Jaiswal) ಮತ್ತು ಮ್ಯಾನ್‌ಹ್ಯಾಟನ್ ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ಅಮೂಲ್ಯವಾದ ಭಾರತೀಯ ಪ್ರಾಚೀನ ವಸ್ತುಗಳನ್ನು ಅಮೆರಿಕ ಹಸ್ತಾಂತರಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾದ ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ – ಚಂದ್ರಯಾನ-3ರ ಬಿಡಿಭಾಗ?
Advertisement
Advertisement
ಈ ಸಂದರ್ಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತರಂಜಿತ್ ಸಿಂಗ್ ಸಂಧು, ಭಾರತಕ್ಕೆ ಹಿಂದಿರುಗಿಸಿದ 100ಕ್ಕೂ ಹೆಚ್ಚು ಪುರಾತನ ವಸ್ತುಗಳು ಕೇವಲ ಕಲೆ ಮಾತ್ರವಲ್ಲದೇ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಧರ್ಮದ ಭಾಗವಾಗಿದೆ. ಕಳೆದು ಹೋದ ಪರಂಪರೆಯನ್ನು ಮತ್ತೆ ಭಾರತಕ್ಕೆ ಹಿಂದಿರುಗಿಸಿದಾಗ, ಅದನ್ನು ಅತ್ಯಂತ ಭಾವನಾತ್ಮಕವಾಗಿ ಸ್ವೀಕರಿಸಲಾಗುತ್ತದೆ. ಅಲ್ಲದೇ ಭಾರತಕ್ಕೆ ಸೇರಿದ ಈ ಪ್ರಾಚೀನ ವಸ್ತುಗಳನ್ನು ಅತೀ ಶೀಘ್ರದಲ್ಲಿ ಭಾರತಕ್ಕೆ ಸಾಗಿಸಲಾಗುವುದು ಎಂದರು. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
Advertisement
Advertisement
ಒಟ್ಟು 105 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದು, ಅದರಲ್ಲಿ 47 ಕಲಾಕೃತಿಗಳು ಪೂರ್ವ ಭಾರತದಿಂದ, 27 ದಕ್ಷಿಣ ಭಾರತದಿಂದ, 22 ವಸ್ತುಗಳು ಮಧ್ಯ ಭಾರತದಿಂದ, ಉತ್ತರ ಭಾರತದಿಂದ 6 ಮತ್ತು ಪಶ್ಚಿಮ ಭಾರತದಿಂದ 3 ಪುರಾತನ ವಸ್ತುಗಳಿವೆ ಎಂದು ವರದಿಗಳು ತಿಳಿಸಿವೆ. ಈ ಎಲ್ಲಾ ಪ್ರಾಚೀನ ವಸ್ತುಗಳು 2-3ನೇ ಶತಮಾನದಿಂದ 18-19ನೇ ಶತಮಾನದವುಗಳಾಗಿದ್ದು, ಇದನ್ನು ಟೆರಾಕೋಟಾ, ಕಲ್ಲು, ಲೋಹ ಮತ್ತು ಮರದಿಂದ ಮಾಡಲಾಗಿದೆ. ಇದರಲ್ಲಿ ಸುಮಾರು 50 ಕಲಾಕೃತಿಗಳು ಧಾರ್ಮಿಕ (ಹಿಂದೂ ಧರ್ಮ, ಜೈನ ಮತ್ತು ಇಸ್ಲಾಂ) ವಿಷಯಕ್ಕೆ ಸಂಬಂಧಿಸಿದ್ದು, ಉಳಿದವುಗಳು ಸಾಂಸ್ಕೃತಿಕ ಕಲಾಕೃತಿಗಳಾಗಿವೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ
ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಅಲ್ಲದೇ ಪ್ರಾಚೀನ ಕಲಾಕೃತಿಯನ್ನು ಭಾರತಕ್ಕೆ ಮರಳಿಸುವಲ್ಲಿ ಸಹಾಯ ಮಾಡಿದ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿ ಮತ್ತು ಹೋಮ್‌ಲ್ಯಾಂಡ್ ಅಧಿಕಾರಿಗಳಿಗೆ ತರಂಜಿತ್ ಸಿಂಗ್ ಸಂಧು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ
ಪ್ರಧಾನಿ ಮೋದಿಯವರು 2016ರಲ್ಲಿ ಅಮೆರಿಕಾಗೆ ಭೇಟಿ ನೀಡಿದ್ದಾಗ ಅಮೆರಿಕಾ ಕಡೆಯಿಂದ 16 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಮೋದಿಯವರ 2021ರ ಅಮೆರಿಕಾ ಭೇಟಿಯಲ್ಲಿ ಯುಎಸ್ ಸರ್ಕಾರ ಒಟ್ಟು 157 ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಸೆಪ್ಟೆಂಬರ್ 2021ರಲ್ಲಿ ಅದನ್ನು ಭಾರತಕ್ಕೆ ಸಾಗಿಸಲಾಯಿತು. ಈ ಬಾರಿ 105 ಪುರಾತನ ವಸ್ತುಗಳು ಮಾತ್ರವಲ್ಲದೇ 2016ರಿಂದ ಒಟ್ಟು 278 ಸಾಂಸ್ಕೃತಿಕ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೂಪಾಯಿ, ದಿರ್ಹಾಮ್ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ
Web Stories