ಬೀದರ್: ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಬೀದರ್ ನ ಕನ್ನಡಿಗರೊಬ್ಬರು ಮಹತ್ವದ ಪಾತ್ರವವಹಿಸಿದ್ದಾರೆ.
ಬೀದರ್ ನ ಜುಗಲ್ ಕಿಶೋರ್ ಮಲಾನಿ ಅವರು ಈ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ 600 ಸಂಘಟನೆಯ ಸದಸ್ಯರುಗಳನ್ನು ಒಂದೆಡೆ ಸೇರಿಸಿದ್ದರು. ಮಲಾನಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮಲಾನಿ ಫ್ಯಾಮಿಲಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement
Advertisement
ಬೀದರ್ ನ ಉಸ್ಮಾನ್ ಗಂಜ್‍ನಲ್ಲಿ ಕಿಶೋರ್ ಮಲಾನಿಯ ನಿವಾಸವಿದ್ದು ಸಹೋದರ, ಸಹೋದರಿ ಸೇರಿದಂತೆ ಸಂಬಂಧಿಕರು ಇಲ್ಲೇ ವಾಸವಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಬೀದರ್ ನಲ್ಲಿ ಮುಗಿಸಿರುವ ಮಲಾನಿ 23 ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿ ಅಲ್ಲೇ ವಾಸವಾಗಿದ್ದಾರೆ. ವರ್ಷಕ್ಕೆ ಎರಡು ಬಾರಿ ಬೀದರ್ ಗೆ ಬಂದು ಹೋಗುತ್ತಾರೆ.
Advertisement
Advertisement
“ಹೌಡಿ ಮೋದಿ” ಕಾರ್ಯಕ್ರಮ ಯಶಸ್ವಿಯಾಗಲು ಮಲಾನಿ ಪ್ರಮಖ ಪಾತ್ರ ವಹಿಸಿದ್ದು, ಜಿಲ್ಲೆಯಲ್ಲಿ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದಕ್ಕೆ ಮಲಾನಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.