ವಾಷಿಂಗ್ಟನ್: ಹಬ್ಬ ಹರಿದಿನ ಬಂದ್ರೆ ಸಾಕು ಪೊಲೀರು ಬಂದೋಬಸ್ತ್ ನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಆದರೆ ಈ ಅವಧಿಯಲ್ಲಿ ಇಬ್ಬರು ಪೊಲೀಸರು ಯುವಕರ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಅವೆಂಚುವರ್ ಪೊಲೀಸ್ ಇಲಾಖೆ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಕ್ರಿಸ್ಮಸ್ ಹಬ್ಬದ ವಸ್ತುಗಳನ್ನು ಖರೀದಿಸಲು ಮಾಲ್‍ಗೆ ಬಂದಿದ್ದ ಜನರನ್ನು ನಮ್ಮ ಪೊಲೀಸರು ರಂಜಿಸಿದ್ದಾರೆ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ಕ್ರಿಸ್ಮಸ್ ನಿಮಿತ್ತ ಶಾಪಿಂಗ್ ಗೆ ಬಂದಿದ್ದ ಕೆಲವು ಯುವಕರು ಡಾನ್ಸ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಇಬ್ಬರು ಪೊಲೀಸರು ಅಲ್ಲಿಂದ ಯುವಕರನ್ನು ಕಳಿಸಲು ಮುಂದಾಗಿದ್ದಾರೆ. ಇದರಿಂದ ಯುವಕರು ಬೇಸರ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಕೂಡ ಹೆಜ್ಜೆ ಹಾಕಿದ್ದಾರೆ. ಪೊಲೀಸರನ್ನು ಗಮನಿಸಿದ ಯುವಕರು ಅವರೊಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ.
ಮಾಲ್‍ಗೆ ಬಂದಿದ್ದ ಅನೇಕರು ಪೊಲೀಸರು ಹಾಗೂ ಯುವಕರ ಡಾನ್ಸ್ ನೋಡಿ ಪ್ರೋತ್ಸಾಹ ನೀಡಿ ಚಪ್ಪಾಳೆ ತಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಅಮೆರಿಕದ ಅವೆಂಚುವರ್ ಪೊಲೀಸ್ ಇಲಾಖೆಯು ಡಿಸೆಂಬರ್ 18ರಂದು ಟ್ವೀಟ್ ಮಾಡಿದೆ.
#AventuraPolice taking a moment to celebrate the holiday spirit with @AventuraMall shoppers! @cityofaventura pic.twitter.com/6Gr75b8GGH
— Aventura Police (@aventurapolice) December 18, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv