ಭೋಪಾಲ್: ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯ ಮೂತ್ರಪಿಂಡವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಸಾಗಿಸಿ ಮತ್ತೊಬ್ಬ ರೋಗಿಯನ್ನು ಬದುಕಿಸಲಾಗಿದೆ. ಘಟನೆ ಭೋಪಾಲ್‌ನಲ್ಲಿ ನಡೆದಿದೆ.
ಭೋಪಾಲ್‌ನಲ್ಲಿ ನಿರ್ಮಿಸಲಾಗಿದ್ದ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ 23 ಕಿಮೀ ದಾರಿಯನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಯೊಬ್ಬರ ಜೀವ ಉಳಿಸಿದೆ.
Advertisement
ಶಾಹಪುರದ ಬನ್ಸಾಲ್ ಆಸ್ಪತ್ರೆಯಿಂದ ಬೈರ್‌ಗಡದ ವಿವಾ ಆಸ್ಪತ್ರೆಯ ವರೆಗೆ ಸಂಚಾರ ಪೊಲೀಸರು ಶನಿವಾರ ಸಂಜೆ ಗ್ರೀನ್ ಕಾರಿಡಾರ್ ವ್ಯವಸ್ಥೆ ನಿರ್ಮಿಸಿದ್ದರು. ಈ ಎರಡೂ ಆಸ್ಪತ್ರೆಗಳು 23 ಕಿಮೀ ದೂರವಿದ್ದು, ಸಂಜೆ 4:20 ರಿಂದ 4:35ರ ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್ ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಗೆ ಮೂತ್ರಪಿಂಡ ಸಾಗಿಸಿ, ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವೃದ್ಧ
Advertisement
Advertisement
ಮಹಿಳೆಯೊಬ್ಬರನ್ನು ಜನವರಿ 25ರಂದು ಮೆದುಳಿನ ರಕ್ತ ಸ್ರಾವದ ಕಾರಣ ಬನ್ಸಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 4 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಮಹಿಳೆ ಗುಣಮುಖರಾಗುವ ಸೂಚನೆ ಕಾಣಿಸಲಿಲ್ಲ. ಬಳಿಕ ಅವರ ಅಂಗಾಂಗ ದಾನಕ್ಕೆ ಕುಟುಂಸ್ಥರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ
Advertisement
ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್, ಕಡ್ನಿ, ಕಣ್ಣುಗಳನ್ನು ಬನ್ಸಾಲ್ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಒಂದು ಕಿಡ್ನಿಯನ್ನು ವಿವಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ ಮಾಡಲಾಗಿದ್ದು, 70 ವರ್ಷದ ರೋಗಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.