ಮಂಡ್ಯ: ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದ್ದ ಘಟನೆ ಮಂಡ್ಯದ (Mandya) ಕೆರೆಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ (Ambulance Service) ಸ್ಥಗಿತಗೊಂಡಿರುವುದು ಸರ್ಕಾರಿ ಆಸ್ಪತ್ರೆಯ (Government Hospital) ಮತ್ತೊಂದು ಅಧೋಗತಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್ ಶಾಸಕ ಜಿಟಿಡಿ, ಪುತ್ರ ಹರೀಶ್ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
Advertisement
Advertisement
ಅಂಬುಲೆನ್ಸ್ ಮುಂಬದಿ ಗ್ಲಾಸ್ ಮೇಲೆ `ಡಿಸೇಲ್ ಇಲ್ಲದ ಕಾರಣ ಆಂಬುಲೆನ್ಸ್ ಸೇವೆ ಸ್ಥಗಿತ’ ಎಂದು ಆಸ್ಪತ್ರೆ ಸಿಬ್ಬಂದಿ ಪೋಸ್ಟ್ ಅಂಟಿಸಿದ್ದಾರೆ. ಈ ಪೋಸ್ಟರ್ ನೋಡಿದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಇದನ್ನೂ ಓದಿ: ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ
Advertisement
ಸರ್ಕಾರದಲ್ಲಿ ಆಂಬುಲೆನ್ಸ್ಗೆ ಡಿಸೇಲ್ ಹಾಕಲೂ ದುಡ್ಡಿಲ್ವ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್ರಾಜ್ ವಿಮಾನ ಟಿಕೆಟ್ ದರ ದುಬಾರಿಯೋ ದುಬಾರಿ
Advertisement
ತರಾಟೆ ಬೆನ್ನೆಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊನೆಗೂ ಅಂಬುಲೆನ್ಸ್ಗೆ ಡಿಸೇಲ್ ಹಾಕಿ ಸೇವೆಗೆ ಅನುವು ಮಾಡಿಕೊಟ್ಟಿದ್ದಾರೆ.