ರಾಯಚೂರು: ಬಿಜೆಪಿ (BJP) ಶಾಸಕನ ಭಾವಚಿತ್ರವಿದ್ದ ಅಂಬುಲೆನ್ಸ್ನ್ನು (Ambulance) ಚುನಾವಣಾ (Election) ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಸೀಜ್ ಮಾಡಿದ ಪ್ರಕರಣ ದೇವದುರ್ಗದ (Devadurga) ಅರಕೇರಾದಲ್ಲಿ ನಡೆದಿದೆ.
ಶಾಸಕ ಶಿವನಗೌಡ ನಾಯಕ್ ಭಾವಚಿತ್ರವಿದ್ದ ಅಂಬುಲೆನ್ಸ್ ಅರಕೆರಾದ ನಾಡಗೌಡ ಆಸ್ಪತ್ರೆ ಬಳಿ ನಿಂತಿತ್ತು. ಈ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಅಂಬುಲೆನ್ಸ್ ವಶಕ್ಕೆ ಪಡೆದಿದ್ದಾರೆ. ಚಾಲಕ ಫಕೀರಯ್ಯ ಹಾಗೂ ಆಂಬ್ಯುಲೆನ್ಸ್ ಮಾಲೀಕ ಹನುಂತರಾಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಿದರೆ ಬೆಲೆ ಏರಿಕೆ ಕಡಿಮೆ ಆಗಲ್ಲ: ಸತೀಶ್ ಜಾರಕಿಹೊಳಿ
Advertisement
Advertisement
ದೇವದುರ್ಗದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಶಾಸಕನ ಭಾವಚಿತ್ರವನ್ನು ಅಂಬುಲೆನ್ಸ್ನಲ್ಲಿ ಬಳಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ – ಡಿಕೆಶಿ ವಿರುದ್ಧ ರಘು ಆಚಾರ್ ಕಿಡಿ