ಬೆಂಗಳೂರು: ನಗರದಲ್ಲಿ ಸದ್ದಿಲ್ಲದೆ ಆಂಬುಲೆನ್ಸ್ ಮಾಫಿಯಾ ನಡೆಯುತ್ತಿದೆ. ನಗರದ ಬಿಟಿಎಂ ಲೇಔಟ್ ನಲ್ಲಿರುವ ಎಸ್ ಎಲ್ ವಿ ಖಾಸಗಿ ಆಂಬುಲೆನ್ಸ್ ಸರ್ವಿಸ್‍ನ ಚಾಲಕನೊಬ್ಬ ಮೃತದೇಹವನ್ನ ಆಸ್ಪತ್ರೆಯಿಂದ ಕೇವಲ ಮೂರು ಕೀಲೋಮೀಟರ್ ದೂರದ ಮನೆಗೆ ಬಿಟ್ಟು, ಬರೋಬ್ಬರಿ 2,500 ರೂ. ಕೊಡುವಂತೆ ಹೇಳಿದ್ದಾನೆ.
ಮಗಳನ್ನ ಕಳೆದುಕೊಂಡ ಬಡ ತಂದೆ ಕಡಿಮೆ ಮಾಡಿ ಅಂತಾ ಕೇಳಿದ್ರೇ ಆವಾಜ್ ಹಾಕಿ 2,500 ರೂ. ಕೊಡಲೇಬೇಕು ಅಂತ ಡಿಮ್ಯಾಂಡ್ ಮಾಡಿದ್ದಾನೆ. ಬಳಿಕ ಸ್ಥಳೀಯರೊಬ್ಬರು ವ್ಯಕ್ತಿಯ ಪರಿಸ್ಥಿತಿ ನೋಡಿ ಆತನ ಸಹಾಯಕ್ಕೆ ಬಂದು ತಾವೇ ಹಣ ನೀಡಿದ್ದು, ಸರಿಯಾದ ಬಿಲ್ ಕೊಡಿ ಅಂತಾ ಕೇಳಿದ್ರೇ ಆಂಬುಲೆನ್ಸ್ ಚಾಲಕ ಅವರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
Advertisement
ಆಂಬುಲೆನ್ಸ್ ಚಾಲಕ ದರ್ಪವನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಚಾಲಕನ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ಜನರು ಎಸ್ ಎಲ್ ವಿ ಆಸ್ಪತ್ರೆಯ ವೆಬ್ ಸೈಟ್ ನಲ್ಲಿ ಕಮೆಂಟ್ ಮಾಡುವ ಮೂಲಕ ಆಂಬುಲೆನ್ಸ್ ಸೇವೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.