ಚೆನ್ನೈ: ವಾಯುಪಡೆ ಹೆಲಿಕಾಪ್ಟರ್ ಪತನ ದುರಂತದಿಂದ ಮೃತಪಟ್ಟವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ತಮಿಳುನಾಡಿನ ಮೆಟ್ಟುಪಾಳಯಂನಲ್ಲಿ ನಡೆದಿದೆ.
Advertisement
ಕೂನೂರು ವಿಲ್ಲಿಂಗ್‌ಟನ್‌ನ ಎಂಆರ್‌ಸಿಯಿಂದ ಪಾರ್ಥಿವ ಶರೀರಗಳನ್ನು ಅಂಬುಲೆನ್ಸ್‌ನಲ್ಲಿ ಸೂಳೂರು ಏರ್‌ಬೇಸ್‌ಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬೆಂಗಾವಲು ವಾಹನ ಅಪಘಾತದಕ್ಕೀಡಾಗಿದೆ. ಇದರಿಂದಾಗಿ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ಗೂ ಅಪಘಾತವಾಗಿದೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್ ರಾವತ್ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು
Advertisement
Advertisement
ಅಂಬುಲೆನ್ಸ್ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದಿದ್ದು, ಅದರ ಮುಭಾಂಗ ಜಖಂಗೊಂಡಿದೆ. ಇದರಿಂದ ಸಂಚಾರ ವಿಳಂಬವಾಯಿತು. ಅಂಬುಲೆನ್ಸ್‌ನಲ್ಲಿದ್ದ ಪಾರ್ಥಿವ ಶರೀರಗಳನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಿ ರವಾನೆ ಮಾಡಲಾಯಿತು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದ ಬಗ್ಗೆ ಸಂಸತ್‍ನಲ್ಲಿ ಮಾಹಿತಿ ನೀಡಿದ್ರು ರಾಜನಾಥ್ ಸಿಂಗ್
Advertisement
ಅಪಘಾತದಿಂದಾಗಿ ಏಳು ಮಂದಿ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೀಡಾದ ಅಂಬುಲೆನ್ಸ್‌ನಿಂದ ಮತ್ತೊಂದು ವಾಹನಕ್ಕೆ ಪಾರ್ಥಿವ ಶರೀರಗಳನ್ನು ಸ್ಥಳಾಂತರಿಸಲು ಸ್ಥಳೀಯರು ಸಹಾಯ ಮಾಡಿದರು. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಉಳಿದ ಸೇನಾ ಸಿಬ್ಬಂದಿ ಪಾರ್ಥಿವ ಶರೀರಗಳನ್ನು ಇಂದು ದೆಹಲಿಗೆ ರವಾನಿಸಲಾಗುತ್ತದೆ. ಅಂತಿಮ ದರ್ಶನದ ಬಳಿಕ ಸೇನಾ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.